ಚಿಕ್ಕಬಳ್ಳಾಪುರ: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ವಿಚಾರವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ವೀರ ಸಾವರ್ಕರ್ ಫೋಟೋ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ವೀರ ಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ತಮ್ಮ ಯೌವ್ವನವನ್ನೇ ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿಟ್ಟವರು. ವೀರ ಸಾವರ್ಕರ್ ಫೋಟೋಗೆ ಕಾಂಗ್ರೆಸ್ ಆಕ್ಷೇಪ ಮಾಡುವುದು ಸರಿಯಲ್ಲ. ಎಲ್ಲವನ್ನೂ ರಾಜಕಾರಣದ ಉದ್ದೇಶದಿಂದ ನೋಡೋದು ಕಾಂಗ್ರೆಸ್ಗೆ ಹವ್ಯಾಸ. ಸದನದಲ್ಲಿ ಜನಪರ ವಿಷಯಗಳನ್ನು ಚರ್ಚೆ ಮಾಡಲು ಕಾಂಗ್ರೆಸ್ ಪಕ್ಷದವರ ಬಳಿ ವಿಷಯಗಳಿಲ್ಲ. ರಚನಾತ್ಮಕ ಸಲಹೆಗಳನ್ನು ಕೊಡೋದು ಬಿಟ್ಟು ಪ್ರತಿಭಟನೆ ಮಾಡೋದು ಸರಿ ಅಲ್ಲ.
ಇದು ರಾಜ್ಯದ ಜನರಿಗೆ ಮಾಡ್ತಿರೋ ಅವಮಾನ, ಅಪಮಾನವಾಗಿದೆ ಎಂದರು.ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರ ಸರ್ಕಾರ ಇದ್ದಾಗ ಅವರು ವಿಪಕ್ಷಗಳ ಜೊತೆ ಚರ್ಚೆ ಮಾಡಿ ಇಟ್ಟಿದ್ರಾ? ಇದು ಡಬಲ್ ಸ್ಯಾಂಡರ್ಡ್ ನಿಲುವು. ಇದನ್ನು ಜನ ನೋಡ್ತಾರೆ. ಯಾವಾಗಲೂ ದಸರಾ ಮಾಡೋಕೆ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಸುಧಾಕರ್ ಇದೇ ವೇಳೆ ತಿರುಗೇಟು ನೀಡಿದ್ದಾರೆ.