ಬಾಗಲಕೋಟೆ : ಈ ದೇಶಕ್ಕೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಏನು ಸಂಬಂಧ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
BIGG NEWS: ವೀರ ಸಾವರ್ಕರ್ ವಿಚಾರವನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ; ಯತ್ನಾಳ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮತ್ತು ಅವರ ಶಿಷ್ಯಂದಿರಿಗೆ ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲು ಗೊತ್ತು. ಇವರೆಲ್ಲಾ ವ್ಯಯಕ್ತಿಕವಾಗಿ ಮಾಡಿದಂತರ ರಾಷ್ಟದ್ರೋಹಿ ಚಟುವಟಿಕೆಗಳಿಗಾಗಿ ಜೈಲು ಸೇರಿದರು. ಆದರೆ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಸೇರಿದರು ಎಂದರು.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರ ಸಂಬಂಧ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕಕ್ಕೂ ಸಾವರ್ಕರ್ ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೆ.ಎಸ್. ಈಶ್ವರಪ್ಪ ದೇಶಕ್ಕೂ ಸೋನಿಯಾ, ರಾಹುಲ್ ಗಾಂಧಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
BIGG NEWS: ತುಮಕೂರಿನಲ್ಲಿ ಹಣದ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ; ಮೂವರು ಕ್ರೈಸ್ತ ಧರ್ಮದ ಪ್ರಚಾರಕರು ಅರೆಸ್ಟ್