ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲೂ ಸಹ ಜಾನುವಾರುಗಳಿಗೆ ಚರ್ಮಗಂಟು ರೋಗ ಹಬ್ಬಿದೆ. ಇದರಿಂದ ಕೋಡೂರಿನಲ್ಲಿ ಚರ್ಮಗಂಟು ರೋಗ ಬಾಧಿಸಿದ್ದು, ಮೊದಲ ಬಲಿ ಪಡೆದಿದೆ.
BIGG NEWS : ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ಇಂದು ರೈತ ಸಂಘಟನೆಗಳಿಂದ ‘ಮದ್ದೂರು ಬಂದ್’ಗೆ ಕರೆ
ಕರಿಗೆರಸು ಗ್ರಾಮದ ಹಿಂಡ್ಲೆಮನೆ ಶ್ರೀನಿವಾಸ ಹೆಚ್.ಕೆ ಶ್ರೀನಿವಾಸ್ ಎಂಬುವರಿಗೆ ಸೇರಿದ್ದಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹೋರಿ ಚರ್ಮಗಂಟು ರೋಗದಿಂದ ಬಳಲುತ್ತಿತ್ತು. ಪಶುವೈದ್ಯರ ಹತ್ರ ಚಿಕಿತ್ಸೆ ಕೂಡ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ. ಸ್ಥಳಕ್ಕೆ ಕೋಡೂರು ಪಶು ಆಸ್ಪತ್ರೆಯ ವೈದ್ಯ ಪಣಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದುಎಂದು ಹೇಳಿದ್ದಾರೆ. ಮಲೆನಾಡು ಭಾಗಗಳಲ್ಲಿ ಚರ್ಮಗಂಟು ರೋಗದಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.