ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಇಂತಹ ಮೀಸಲಾತಿ ಹೆಚ್ಚಳದ ಮಸೂದೆಯನ್ನು ನಾಳೆಯಿಂದ ಆರಂಭಗೊಳ್ಳುತ್ತಿರುವಂತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸೋದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಮಂಡ್ಯದ ಮದ್ದೂರು ಬಳಿಯ ಎಲಿವೇಟೆಡ್ ರಸ್ತೆಯಲ್ಲಿ ಕೆಟ್ಟು ನಿಂತ ಮಾಜಿ ಸಿಎಂ ಎಸ್.ಎಂ ಕೃಷ್ಣ ಕಾರು | SM Krishna
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಈ ಅಧಿವೇಶನದಲ್ಲಿ ಮಂಡಿಸಲಿರುವ ವಿಧೇಯಕಗಳ ಪೈಕಿ, ಎಸ್ಸಿ, ಎಸ್ ಟಿ ಮೀಸಲಾತಿ ಸುಗ್ರೀವಾಜ್ಞೆ ಬದಲಿ ಮಸೂದೆಯೂ ಒಂದಾಗಿದೆ ಎಂದರು.
ಚಿತ್ರದುರ್ಗ: ಡಿ.22ರಿಂದ ಕೇತೇದೇವರ ಜಾತ್ರೆ ಆರಂಭ, ಜ.9ರಂದು ಎರೆದ ಕಳ್ಳೆ ಗುಡಿಹತ್ತಿ ಕಳಸ ಇಳಿಸುವ ಕಾರ್ಯಕ್ರಮ
ನಾಳೆಯಿಂದ ಆರಂಭಗೊಳ್ಳುತ್ತಿರುವಂತ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಗುತ್ತದೆ. ಇದಲ್ಲದೇ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.
‘ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ’ಯಿಂದ ಮತ್ತಷ್ಟು ಅಭಿವೃದ್ಧಿ ಸಾಧ್ಯ- ಮಾಜಿ ಸಿಎಂ ಎಸ್.ಎಂ.ಕೃಷ್ಣ
ಅಂದಹಾಗೇ ರಾಜ್ಯ ಸರ್ಕಾರದಿಂದ ಎಸ್ಸಿ ಮೀಸಲಾತಿಯ ಪ್ರಮಾಣವನ್ನು ಶೇ.15 ರಿಂದ 17ರಷ್ಟು ಹಾಗೂ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಲಾಗಿತ್ತು. ಇದೀಗ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದನ್ನು ನಾಳೆಯಿಂದ ಆರಂಭಗೊಳ್ಳುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ಜಾರಿಗೊಳಿಸಲಿದೆ.