ಕಾರವಾರ: ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಕೇಂದ್ರಿಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ತಾಲೂಕಿನ ಇಬ್ಬರು ಖ್ಯಾತ ವೈದ್ಯರನ್ನು ಗೌರವಿಸಲಾಯಿತು. ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಾಜರಿದ್ದ ತಾಲೂಕಿನ ಪ್ರಸಿದ್ಧ ಮಕ್ಕಳ ವೈದ್ಯ ಡಾ. ಪ್ರಮೋದ್ ಫಾಯ್ದೆ ಹಾಗೂ ತಾಲೂಕಿನ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಆಶಿಕ್ ಹೆಗ್ಡೆಯವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.
ಮಕ್ಕಳ ಬೆಳವಣಿಗೆಗೆ ಕಲೆ ಅವಶ್ಯಕ.ಒಂದು ಗಿಡ ಬೆಳೆಯಲು ಪೋಷಕಾಂಶಗಳು ಹೇಗೆ ಅಗತ್ಯವೋ ಅದರಂತೆ ವಿದ್ಯಾರ್ಥಿಗಳಿಗೂ ಪ್ರತಿಭೆ ಅನ್ನುವುದು ತೀರಾ ಅವಶ್ಯಕ. ಕ್ರೀಡೆ, ನೃತ್ಯ, ಗಾಯನ ಇವೆಲ್ಲವೂ ಆರೋಗ್ಯಕ್ಕೆ ಪೂರಕವಾದ ದ್ದು ಎಂದು ನುಡಿದರು. ಅಲ್ಲದೆ ಎಸ್.ಡಿ.ಎಂ ಕಾಲೇಜಿನ ಪೂರ್ವ ವಿದ್ಯಾರ್ಥಿಯಾಗಿ ಕಾಲೇಜಿನ ಬೆಳವಣಿಗೆಗೆ ತನ್ನಿಂದ ಆದಂತಹ ಸಹಾಯವನ್ನು ಮಾಡುವ ಭರವಸೆಯನ್ನು ನೀಡಿದರು.
ಇನ್ನು ಎರಡನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂದಿದ್ದ ಡಾ. ಆಶಿಕ್ ಹೆಗ್ಡೆ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿಯ ಕುರಿತು ಮಾತನಾಡಿದರು. ನನ್ನ ಮಕ್ಕಳು ಸಹ ಕೇಂದ್ರೀಯ ವಿದ್ಯಾಲಯದಲ್ಲಿಯೇ ಕಲಿತಿದ್ದು. ಇಲ್ಲಿ ಮಕ್ಕಳ ಅಭ್ಯುದಯಕ್ಕೆ ಬೇಕಾದ ಎಲ್ಲ ಸೌಲಭ್ಯಗಳಿವೆ. ಹತ್ತು ವರ್ಷಗಳಲ್ಲಿ ಈ ಶಾಲೆ ಶತಮಾನೋತ್ಸವ ಆಚರಿಸಬಲ್ಲಂತ ಶಾಲೆಯ ಸವಲತ್ತುಗಳನ್ನು ಹೊಂದಿದೆ. ಈ ಶಾಲೆಯ ಹಾಗೂ ಕಾಲೇಜಿಗೆ ಬೇಕಾದ ಸಹಾಯವನ್ನು ಮಾಡುವ ಆಶ್ವಾಸನೆ ನೀಡಿದರು.
ಎರಡೂ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಮಾತನಾಡಿ ಪ್ರತಿಭೆ ಪ್ರತಿಯೊಬ್ಬರ ಅಂತರಾಳದಲ್ಲಿ ಇರುತ್ತದೆ.ಇಂತಹ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವ್ಯಕ್ತಿಗಳನ್ನು ಅತಿಥಿಗಳಾಗಿ ಕರೆಸುವ ಸಂಪ್ರದಾಯ ಹೊಂದಿದ್ದೇವೆ. ಯಾಕೆಂದರೆ ವಿದ್ಯಾರ್ಥಿಗಳಿಗೆ ಅವರಿಂದ ಹೆಚ್ಚು ಉತ್ತೇಜನ ಸಿಗಲಿದೆ. ಅವರ ಪ್ರತಿಭೆ ನಮ್ಮ ಮಕ್ಕಳ ಮೇಲೆ ಪ್ರಭಾವವನ್ನು ಬೀರಲಿ ಎಂಬುದು ಇಂತಹ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಮೊದಲನೇ ದಿನದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಎರಡನೇ ದಿನದ ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಳೆದ ವರ್ಷ 2021-22 ನೇ ಸಾಲಿನ ಹತ್ತನೇ ತರಗತಿಯಲ್ಲಿ ಮೊದಲ ಮೂರು ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಇದೀಗ ಪಿಯುಸಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ, ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಾಲಕರು ಬಂದು ಸನ್ಮಾನವನ್ನು ಪಡೆದರು. ಇದೇ ವೇಳೆ ಎಂ.ಪಿ.ಇ.ಸೊಸೈಟಿಯ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯಾ ಸಂಜೀವಿನಿ ಯೋಜನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯ್ತು.
ಈ ಸಂದರ್ಭದಲ್ಲಿ ಮಲ್ನಾಡ್ ಪ್ರೋಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸದಸ್ಯರು , ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ. ಕಾಂತಿ ಭಟ್ , ಎಲ್ಲಾ ಶಿಕ್ಷಕ ,ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.