ಮೈಸೂರು: ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಜನರಿಂದಲೇ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ( Siddaramaiah ) ಹೆಲಿಕಾಪ್ಟರ್ ಗಿಫ್ಟ್ ( Helicopter Gift ) ನೀಡಲಾಗುತ್ತಿದೆ. ಇದಕ್ಕಾಗಿ ಕ್ಷೇತ್ರದ ಜನರಿಂದಲೇ ಚೆಂದಾ ವಸೂಲಿ ಮಾಡಲಾಗುತ್ತಿದ್ದು, ವಸೂಲಿಯಾದಂತ ಚೆಂದಾದಲ್ಲಿಯೇ ಹೆಲಿಕಾಪ್ಟರ್ ಗಿಫ್ಟ್ ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahamad Khan ) ಅವರು, ಸಿದ್ಧರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಮಾಡುವಂತ ಕೆಲಸಗಳನ್ನು 5 ವರ್ಷಗಳಲ್ಲಿ ಮಾಡಿದ್ದಾರೆ. ಹೀಗಾಗಿ ಬಾದಾಮಿ ಕ್ಷೇತದಲ್ಲಿಯೇ ಸ್ಪರ್ಧಿಸುವಂತೆಯೂ ಮನವಿ ಮಾಡುತ್ತಿದ್ದಾರೆ ಎಂದರು.
ಶಾಸಕರಾದ ಮೇಲೆ ಕ್ಷೇತ್ರಕ್ಕೆ 15 ದಿನಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ಅವರ ಆಸೆಯಾಗಿದೆ. ಆದ್ರೇ ಬಾದಾಮಿ ಕ್ಷೇತ್ರ ನನಗೆ ದೂರವಾಗುತ್ತಿದೆ. ಹದಿನೈದು ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಭೇಟಿ ನೀಡೋದಕ್ಕೆ ಆಗುತ್ತಿಲ್ಲ ಎಂಬ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿಸಿದರು.
‘ಯೂಟ್ಯೂಬ್’ನಿಂದ ‘ಪೋರ್ನ್ ಹಬ್’ ಅಧಿಕೃತ ಚಾನೆಲ್ ನಿಷೇಧ | Pornhub’s Official Channel
ಸಿದ್ಧರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರಕ್ಕೆ ಓಡಾಡುವುದಕ್ಕೆ ಕಷ್ಟ ಆಗುತ್ತಿರುವುದರಿಂದ ಅವರು ಬಾದಾಮಿ ಕ್ಷೇತ್ರಕ್ಕೆ ಬಂದು ಹೋಗುವುದಕ್ಕೆ ಹೆಲಿಕಾಪ್ಟರ್ ಕೊಡುಗೆ ನೀಡಲು ಕ್ಷೇತ್ರದ ಜನರು ಬಯಸಿದ್ದಾರೆ. ಹೊಸ ಹೆಲಿಕಾಪ್ಟರ್ ಖರೀಗಿದೆ 25 ಕೋಟಿ ಆಗಲಿದೆ. ಅಷ್ಟು ಆದರೂ ಪರವಾಗಿಲ್ಲ ಕೊಡಿಸಿಯೇ ತೀರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕಾಗಿ ಚೆಂದಾ ವಸೂಲಿ ಮಾಡೋದಕ್ಕೆ ಶುರು ಮಾಡಿದ್ದಾರೆ ಎಂದರು.