ರಾಯಚೂರು: ಸಾರ್ವಜನಿಕರ ಮೇಲೆ ದಬ್ಬಾಳಿಕೆ ಆರೋಪ ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ನಿರಂತರವಾಗಿ ದೂರುಗಳ ಬಂದ ಸಲುವಾಗಿ ರಾಯಚೂರು ಸಿರವಾರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ ಅವರನ್ನು ಅಮಾನತ್ತು ಮಾಡಲಾಗಿದೆ.
ಗೀತಾಂಜಲಿ ಶಿಂಧೆ ವಿರುದ್ದ ಸಾರ್ವಜನಿಕರು ಹಲವು ಸಾರಿ ಪ್ರತಿಭಟನೆಯನ್ನು ಕೂಡ ನಡೆಸಿದ್ದು, ಇದಲ್ಲದೇ ಕೆಲವು ದಿನಗಳ ಹಿಂದೆ ಯುವಕನೊಬ್ಬ ಗೀತಾಂಜಲಿ ಶಿಂಧೆ ವಿರುದ್ದ ಡೆತ್ ನೋಟು ಬರೆದಿಟ್ಟು ಕಾಣಿಯಾಗಿದ್ದ.ಈ ವಿರುದ್ದ ಕೂಡ ಶಿಂಧೆ ಕೆಲಸ ಮಾಡುತ್ತಿದ್ದ ಪೋಲಿಸ್ ಠಾಣೆಯಲೇ ದೂರು ದಾಖಲಾಗಿತ್ತು.
ಅಂದ ಹಾಗೇ ಕುಷ್ಟಗಿ ತಾಲೂಕಿನಲ್ಲಿ ಮೊದಲ ಸಿಎಂ ಪದಕ ಪಡೆದ ಮಹಿಳಾ ಸಬ್ ಇನ್ಸ್ಪೆಕ್ಟರ್ ಎನ್ನುವ ಕೀರ್ತಿಗೆ ಪಿಎಸ್ಐ ಗೀತಾಂಜಲಿ ಶಿಂಧೆ ಪಾತ್ರರಾಗಿದ್ದಾರೆ.