ಹುಬ್ಬಳ್ಳಿ: ಎಂಇಎಸ್ ಪುಂಡರನ್ನು ಕಟ್ಟಿ ಹಾಕುವುದು ನಮಗೆ ಗೊತ್ತು ಸಿಎಂ ಬಸವರಾಜ ಬೊಮ್ಮಾಯಿ ಅಂತ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು,ಮ ಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಪುಂಡಾಟಿಕೆ ಇದೇ ಮೊದಲಲ್ಲ, ಅವರು ಕಳೆದ 50 ವರ್ಷದಿಂದ ಪುಂಡಾಟ ಮಾಡುತ್ತಲೇ ಬಂದಿದ್ದಾರೆ ಅಂತ ತಿಳಿಸಿದರು.
ಇನೂ ಕುಕ್ಕರು ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ಡಿ ಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಿದ್ದರಾಮಯ್ಯವರಿಗೆ ತಮ್ಮ ಡಿಕೆಶಿ ಅವರ ಪೂರ್ಣ ಹೇಳಿಕೆಯನ್ನು ಗಮನಿಸಿ ಅಂತ ತಿಳಿಸಿದರು. ಇನ್ನೂ ನಾಳೆ ಅಧಿವೇಶನದಲ್ಲಿ ಎಸ್ ಸಿ ಎಸ್ಟಿ ಮೀಸಲಾತಿ ಮಸೂದೆಯನ್ನು ಮಂಡನೆ ಮಾಡಲಾಗುವುದು ಅಂಥ ತಿಳಿಸಿದರು.