ಬೆಂಗಳೂರು: ಬಿಜೆಪಿ ಆಳ್ವಿಕೆಯಲ್ಲಿ ರೌಡಿಗಳು ಮೆರೆಯುತ್ತಿದ್ದಾರೆ, ಪೊಲೀಸರು ದಯಾಮರಣ ಕೋರುತ್ತಿದ್ದಾರೆ. ರಾಜ್ಯದಲ್ಲಿ ಕ್ರಿಮಿನಲ್ಗಳ ಆಟಾಟೋಪ ಮಿತಿ ಮೀರುತ್ತಿದೆ, ಇದನ್ನು ನಿಗ್ರಹಿಸಬೇಕಾದ ಪೊಲೀಸರಿಗೆ ಬದುಕು ನಡೆಸುವುದೇ ಕಷ್ಟವೆನಿಸುತ್ತಿದೆ. ವಿಫಲ ಸಚಿವ ಅರಗ ಜ್ಞಾನೇಂದ್ರ ಅವರೇ, ನೀವು ಹುದ್ದೆಯಲ್ಲಿರಲು ಒಂದೇ ಒಂದು ಘನ ಕಾರಣ ಹೇಳಿಬಿಡಿ ಎಂದು ಕರ್ನಾಟಕ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಬಿಜೆಪಿ ಆಳ್ವಿಕೆಯಲ್ಲಿ ರೌಡಿಗಳು ಮೆರೆಯುತ್ತಿದ್ದಾರೆ, ಪೊಲೀಸರು ದಯಾಮರಣ ಕೋರುತ್ತಿದ್ದಾರೆ.
ರಾಜ್ಯದಲ್ಲಿ ಕ್ರಿಮಿನಲ್ಗಳ ಆಟಾಟೋಪ ಮಿತಿ ಮೀರುತ್ತಿದೆ, ಇದನ್ನು ನಿಗ್ರಹಿಸಬೇಕಾದ ಪೊಲೀಸರಿಗೆ ಬದುಕು ನಡೆಸುವುದೇ ಕಷ್ಟವೆನಿಸುತ್ತಿದೆ.
ವಿಫಲ ಸಚಿವ @JnanendraAraga ಅವರೇ, ನೀವು ಹುದ್ದೆಯಲ್ಲಿರಲು ಒಂದೇ ಒಂದು ಘನ ಕಾರಣ ಹೇಳಿಬಿಡಿ. pic.twitter.com/umFMCKImsV
— Karnataka Congress (@INCKarnataka) December 18, 2022
ಈ ಕುರಿತು ಟ್ವಿಟ್ ಮಾಡಿದ್ದು, ಬಿಜೆಪಿ ಆಡಳಿತದಲ್ಲಿ ರಕ್ಷಕರಿಗೇ ರಕ್ಷಣೆ ಇಲ್ಲದಾಗಿದೆ, ಗುತ್ತಿಗೆದಾರರು ದಯಾಮರಣ ಕೋರಿದ ಬೆನ್ನಲ್ಲೇ, ಪೊಲೀಸರು ಸಾವನ್ನು ದಾಯಪಾಲಿಸಿ ಎನ್ನುತ್ತಿರುವುದು ತೀರ ಶೋಚನೀಯ. ಬಿಜೆಪಿ ಆಳ್ವಿಕೆಯಲ್ಲಿ ಬದುಕುವುದಕ್ಕಿಂತ ಸಾವೇ ಉತ್ತಮ ಎಂಬಂತಾಗಿದೆಯೇ? ಅರಗ ಜ್ಞಾನೇಂದ್ರ ಅವರ ಅಸಾಮರ್ಥ್ಯ, ಅಜ್ಞಾನವೇ ಇಂತಹ ದುರಾವಸ್ಥೆಗೆ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದೆ.
ಬಿಜೆಪಿ ಆಡಳಿತದಲ್ಲಿ ರಕ್ಷಕರಿಗೇ ರಕ್ಷಣೆ ಇಲ್ಲದಾಗಿದೆ,
ಗುತ್ತಿಗೆದಾರರು ದಯಾಮರಣ ಕೋರಿದ ಬೆನ್ನಲ್ಲೇ, ಪೊಲೀಸರು ಸಾವನ್ನು ದಾಯಪಾಲಿಸಿ ಎನ್ನುತ್ತಿರುವುದು ತೀರ ಶೋಚನೀಯ.@BJP4Karnataka ಆಳ್ವಿಕೆಯಲ್ಲಿ ಬದುಕುವುದಕ್ಕಿಂತ ಸಾವೇ ಉತ್ತಮ ಎಂಬಂತಾಗಿದೆಯೇ?@JnanendraAraga ಅವರ ಅಸಾಮರ್ಥ್ಯ, ಅಜ್ಞಾನವೇ ಇಂತಹ ದುರಾವಸ್ಥೆಗೆ ನೇರ ಕಾರಣ. pic.twitter.com/FWhBGUkGFe— Karnataka Congress (@INCKarnataka) December 18, 2022
ರೌಡಿಗಳನ್ನ ಮುದ್ದಿಸುವ ಬಿಜೆಪಿ ಸರ್ಕಾರದಿಂದಾಗಿ ಬೆಂಗಳೂರು ಐಟಿ ಸಿಟಿಯಿಂದ ಕ್ರೈಮ್ ಸಿಟಿಯಾಗುತ್ತಿದೆ. ಬಾಣಸವಾಡಿಯಲ್ಲಿ ಹಫ್ತಾ ವಸೂಲಿಗಾಗಿ ಮಚ್ಚು ಬೀಸಿದ್ದಾರೆ ರೌಡಿಗಳು, ಇದು #BJPRowdyMorcha ಪರಿಣಾಮವಲ್ಲವೇ ಬಿಜೆಪಿ ? ಅರಗ ಜ್ಞಾನೇಂದ್ರ ಅವರ ಕೈಯ್ಯಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಕೆಲಸಕ್ಕೆ ಬಾರದ ಕಳ್ಳೆಪುರಿಯಂತಾಗಿದೆ ಎಂದು ವಾಗ್ಧಾಳಿ ನಡೆಸಿದೆ.
ರೌಡಿಗಳನ್ನ ಮುದ್ದಿಸುವ ಬಿಜೆಪಿ ಸರ್ಕಾರದಿಂದಾಗಿ ಬೆಂಗಳೂರು ಐಟಿ ಸಿಟಿಯಿಂದ ಕ್ರೈಮ್ ಸಿಟಿಯಾಗುತ್ತಿದೆ.
ಬಾಣಸವಾಡಿಯಲ್ಲಿ ಹಫ್ತಾ ವಸೂಲಿಗಾಗಿ ಮಚ್ಚು ಬೀಸಿದ್ದಾರೆ ರೌಡಿಗಳು,
ಇದು #BJPRowdyMorcha ಪರಿಣಾಮವಲ್ಲವೇ @BJP4Karnataka?@JnanendraAraga ಅವರ ಕೈಯ್ಯಲ್ಲಿ
ಕಾನೂನು ಸುವ್ಯವಸ್ಥೆ ಎಂಬುದು ಕೆಲಸಕ್ಕೆ ಬಾರದ ಕಳ್ಳೆಪುರಿಯಂತಾಗಿದೆ! pic.twitter.com/n5gLNnfsXk— Karnataka Congress (@INCKarnataka) December 18, 2022