ಬೆಂಗಳೂರು : ಫುಟ್ ಪಾತ್ ಗಳಲ್ಲಿ ತಮ್ಮ ವಾಹನಗಳನ್ನು ಚಲಾಯಿಸುವವರ ಮೇಲೆ ಬೆಂಗಳೂರು ನಗರ ಸಂಚಾರ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಇನ್ಮುಂದೆ ವಾಹನಗಳನ್ನು ಫುಟ್ ಪಾತ್ ಮೇಲೆ ಚಲಾಯಿಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಲು ಪೊಲೀಸ್ ಇಲಾಖೆ ಸಿದ್ದತೆ ನಡೆಸಿದೆ.
ವಾಹನ ಸವಾರರು ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದರೆ, ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದರ ಜೊತೆಗೆ ಅವರ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಸಂಚಾರ ದಟ್ಟಣೆಯಿಂದ ಮುಂದೆ ಹೋಗಲು ಫುಟ್ ಪಾತ್ ಗಳನ್ನು ಅತಿಕ್ರಮಿಸುವುದು ನಗರದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಈ ಅಜಾಗರೂಕ ಚಾಲನೆಯು ಪಾದಚಾರಿಗಳಿಗೆ ಅಪಾಯವನ್ನುಂಟುಮಾಡುತ್ತಿದೆ. ಹೀಗಾಗಿ ಫುಟ್ ಪಾತ್ ಗಳಲ್ಲಿ ಸವಾರಿ ಮಾಡುವವರ ಪರವಾನಗಿಗಳನ್ನು ಅಮಾನತುಗೊಳಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ.
Good News : ವಸತಿ ರಹಿತ ಬಡಜನತೆಗೆ ಗುಡ್ ನ್ಯೂಸ್ : 22 ಸಾವಿರ ಕುಟುಂಬಗಳಿಗೆ ‘ಉಚಿತ ನಿವೇಶನ