ಚಿತ್ರದುರ್ಗ: ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರು ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲು ಆಗಿದ್ದಾರೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಪಿತೂರಿ ನಡೆಸಿದಂತ ಕೇಸ್ ನಲ್ಲಿ ಸೌಭಾಗ್ಯ ಬಸವರಾಜನ್ ಗೆ ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಇಂದು ಚಿತ್ರದುರ್ಗದ 1ನೇ ಜೆ ಎಂ ಎಫ್ ಸಿ ಕೋರ್ಟ್ ಗೆ ಮುರುಘಾ ಶ್ರೀ ವಿರುದ್ಧ ಪಿತೂರು ಕೇಸ್ ನಲ್ಲಿ ಬಂಧಿತರಾಗಿದ್ದಂತ ಸೌಭಾಗ್ಯ ಬಸವರಾಜನ್ ಅನ್ನು ಪೊಲೀಸರು ಹಾಜರು ಪಡಿಸಿದ್ದರು. ಅವರನ್ನು ಹೆಚ್ಚಿನ ವಿಚಾರಣೆಗೆ ಐದು ದಿನ ನೀಡುವಂತೆ ಪೊಲೀಸರು ಕೋರಿದ್ದರು.
ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಜನರೇ ತೀರ್ಮಾನಿಸಲಿದ್ದಾರೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ಬಗ್ಗೆ ಇಂದು ವಿಚಾರಣೆ ನಡೆಸಿದಂತ ಚಿತ್ರದುರ್ಗದ 1ನೇ ಜೆಎಂಎಫ್ ಸಿ ಕೋರ್ಟ್, ಒಂದು ದಿನ ಸೌಭಾಗ್ಯ ಬಸವರಾಜನ್ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಅಲ್ಲದೇ ನಾಳೆ ಸಂಜೆ 5.45ರೊಳಗೆ ಕೋರ್ಟ್ ಗೆ ವಿಚಾರಣೆ ಮುಗಿಸಿ ಹಾಜರುಪಡಿಸುವಂತೆ ಸೂಚಿಸಿದೆ.