ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ತಾಯಿ ಹಾಗೂ ಇಬ್ಬರು ಪುಟ್ಟ ಕಂದಮ್ಮಗಳು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯಲ್ಲಿ ಗಂಗಾ ಪೂಜೆಗೆಂದು ನಾಯಕನಹಟ್ಟಿಯ ಹಿರೇಕೆರೆಗೆ ಪತಿ ಮಹಾಂತೇಶ ಜೊತೆಗೆ ದುರ್ಗಮ್ಮ(25), ಮಗ ಅಜ್ಜಯ್ಯ(6) ಹಾಗೂ ಪುತ್ರಿ ಸೇವಂತಿ(4) ತೆರಳಿದ್ದರು.
ಆದ್ರೇ ಹೀಗೆ ಗಂಗಾಪೂಜೆಗೆ ತೆರಳಿದ್ದಂತವರಲ್ಲಿ ದುರ್ಗಮ್ಮ, ಮಗ ಅಜ್ಜಯ್ಯ, ಪುತ್ರಿ ಸೇವಂತಿ ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಆದ್ರೇ ಈ ಘಟನೆಯ ಹಿಂದೆ ಪತಿ ಮಹಾಂತೇಶನೇ ಪತ್ನಿ, ಮಕ್ಕಳನ್ನು ನೀರಿಗೆ ತಳ್ಳಿ ಸಾಯಿಸಿರುವಂತ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.