ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನದಿನದಲ್ಲಿ ಸಕ್ಕರೆ ಕಾಯಿಲೆ ಬರೋದು ಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳು, ಹದಿಹರೆಯದವರು, ವಯಸ್ಸಾದವರು ಹೀಗೆ ಎಲ್ಲರಿಗೂ ಈ ಕಾಯಿಲೆ ಅಂಟಿಕೊಳ್ಳುತ್ತಿದೆ. ಮಧುಮೇಹವನ್ನು ಕೇವಲ ನಿಯಂತ್ರಿಸಬಹುದೇ ಹೊರತು, ಈ ಕಾಯಿಲೆಯಿಂದ ಸಂಫೂರ್ಣವಾಗಿ ಗುಣಮುಖವಾಗುವುದು ಸಾಧ್ಯವಿಲ್ಲ ಎನ್ನುತ್ತದೆ ಆಧುನಿಕ ವೈದ್ಯ ವಿಜ್ಞಾನ.
ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
ಅದೆನೆ ಇರಲಿ, ಮಧುಮೇಹ ಕಾಯಿಲೆ ಇಂದು ಬಹುತೇಕ 30ರ ಆಸುಪಾಸಿನಲ್ಲಿರುವ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಧುಮೇಹಕ್ಕೆ ಹಲವು ಕಾರಣಗಳಿವೆಯಾದರೂ, ಈ ರೋಗ ತಗುಲಿರುವ ಬಗ್ಗೆ ಆರಂಭದಲ್ಲೇ ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಹಾಗಾದರೆ ಮಧುಮೇಹದ ಆರಂಭಿಕ ಲಕ್ಷಣಗಳನ್ನು ನೋಡುವುದಾದರೆ…
ಸಕ್ಕರೆ ಕಾಯಿಲೆ ಸಹ ಎರಡು ವಿಧಗಳಿವೆ. ಮೊದಲನೆಯದನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದಾಗಿದ್ದರೆ, ಎರಡನೇಯದನ್ನು ನಿಯಂತ್ರಣದಲ್ಲಿಡಲು ಅತ್ಯಂತ ಕಷ್ಟ ಪಡಬೇಕಾಗುತ್ತದೆ. ಒಂದೊಂದು ಬಗೆಯ ಸಕ್ಕರೆ ಕಾಯಿಲೆಗೆ ಒಂದೊಂದು ತರಹದ ರೋಗ ಲಕ್ಷಣಗಳು ಇರುತ್ತವೆ. ಸಕ್ಕರೆ ಕಾಯಿಲೆಗೆ ಪುರುಷರು, ಮಹಿಳೆಯರು ಎಂಬ ಭೇದಭಾವವಿಲ್ಲ ಎಂಬುದನ್ನು ಮರೆಯಬಾರದು.
ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
ಮಧುಮೇಹದ ಆರಂಭಿಕ ಲಕ್ಷಣಗಳು:
ಇದಕ್ಕಿದಂತೆ ಹೊಟ್ಟೆ ಹಸಿವಾಗುವುದು, ಬಾಯಾರಿಕೆ, ಚರ್ಮ ಸಂಬಂಧಿ ಸಮಸ್ಯೆಗಳು, ದವಡೆ ಮತ್ತು ವಸಡಿನ ಭಾಗದಲ್ಲಿ ಊತ ಕಂಡುಬರುವುದು ಹೀಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಮಧುಮೇಹದ ಆರಂಭಿಕ ಲಕ್ಷಣಗಳಾಗಿವೆ.
ಆಹಾರದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಸೇರಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನಿಮಗೆ ಕೈಕಾಲುಗಳ ಉರಿ ಮತ್ತು ಊತ ಸಹ ಕಂಡು ಬರಬಹುದು. ಇದು ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.