ಬೆಂಗಳೂರು: ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ ಡಿಕೆ ಶಿವಕುಮಾರ್ ಅವರೇ ಶೇ.10ರಷ್ಟು ಮತ ಪಡೆಯಲು ಭಯೋತ್ಪಾದಕ ಚಟುವಟಿಕೆ ನಡೆಸುವ ದೇಶದ್ರೋಹಿಗಳಿಗೆ ಅನುಕಂಪ ತೋರಿದರೆ ಶೇ.90 ರಷ್ಟು ಮತಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ ಎಂಬುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ @DKShivakumar ಅವರೇ ಶೇ.10ರಷ್ಟು ಮತ ಪಡೆಯಲು ಭಯೋತ್ಪಾದಕ ಚಟುವಟಿಕೆ ನಡೆಸುವ ದೇಶದ್ರೋಹಿಗಳಿಗೆ ಅನುಕಂಪ ತೋರಿದರೆ ಶೇ.90 ರಷ್ಟು ಮತಗಳನ್ನು ಕಳೆದು
ಕೊಳ್ಳಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ! 1/3— B Sriramulu (@sriramulubjp) December 15, 2022
ಇಂದು ಸರಣಿ ಟ್ವಿಟ್ ಮಾಡಿರುವಂತ ಅವರು, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯಾದ ಶಾರೀಕ್ ಈ ಹಿಂದೆ ಹಲವಾರು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ನಿಮ್ಮ ಪಾಲಿಗೆ ಅವನೊಬ್ಬ ದೇಶಪ್ರೇಮಿ ಆಗಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದ ಏನಿಲ್ಲ ಎಂದಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯಾದ
ಶಾರೀಕ್ ಈ ಹಿಂದೆ ಹಲವಾರು ದೇಶ ವಿರೋಧಿ ಚಟುವಟಿಕೆಯಲ್ಲಿ
ಭಾಗಿಯಾಗಿ ತಲೆಮರೆಸಿಕೊಂಡಿದ್ದ.
ನಿಮ್ಮ ಪಾಲಿಗೆ ಅವನೊಬ್ಬ ದೇಶಪ್ರೇಮಿ ಆಗಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದ ಏನಿಲ್ಲ. 2/3— B Sriramulu (@sriramulubjp) December 15, 2022
ಇಂತಹ ದೇಶದ್ರೋಹಿಗಳನ್ನು ಓಲೈಕೆ ಮಾಡಿದ ಪರಿಣಾಮದಿಂದಲೇ ಕಾಂಗ್ರೆಸ್ ಇಂದು ಅಸ್ಥಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಕರ್ನಾಟಕದ ಜನತೆಯೇ ತಕ್ಕ ಉತ್ತರ ಕೊಡಲಿದ್ದಾರೆ ಎಂಬುದಾಗಿ ಎಚ್ಚರಿಸಿದ್ದಾರೆ.
ಇಂತಹ ದೇಶದ್ರೋಹಿಗಳನ್ನು ಓಲೈಕೆ ಮಾಡಿದ ಪರಿಣಾಮದಿಂದಲೇ ಕಾಂಗ್ರೆಸ್ ಇಂದು ಅಸ್ಥಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಕರ್ನಾಟಕದ ಜನತೆಯೇ ತಕ್ಕ ಉತ್ತರ ಕೊಡಲಿದ್ದಾರೆ. 3/3
— B Sriramulu (@sriramulubjp) December 15, 2022