ಬೆಂಗಳೂರು: ನಮ್ಮದೇಶದ ಸೈನಿಕರ ಜೊತೆ ನಿಲ್ಲದೆ ಸಾಕ್ಷಿಕೇಳಿದ ಪಕ್ಷವು ಈ ಮಟ್ಟಕ್ಕೆ ಭಯೋತ್ಪಾದಕರ ಸಮರ್ಥನೆಗೆ ನಿಂತದ್ದು ಮಾತ್ರ ನಾಚೆಕೆಗೇಡಿನ ಸಂಗತಿಯೇ ಸರಿ. ಇಂತಹ ವಿಷಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ನ ಹೇಯ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಮ್ಮದೇಶದ ಸೈನಿಕರ ಜೊತೆ ನಿಲ್ಲದೆ ಸಾಕ್ಷಿಕೇಳಿದ ಪಕ್ಷವು ಈ ಮಟ್ಟಕ್ಕೆ ಭಯೋತ್ಪಾದಕರ ಸಮರ್ಥನೆಗೆ ನಿಂತದ್ದು ಮಾತ್ರ ನಾಚೆಕೆಗೇಡಿನ ಸಂಗತಿಯೇ ಸರಿ.
ಇಂತಹ ವಿಷಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ನ ಹೇಯ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ.
4/4
— Nalinkumar Kateel (@nalinkateel) December 15, 2022
ಇಂದು ಅವರು ಸರಣಿ ಟ್ವಿಟ್ ಮಾಡಿದ್ದು, ಬಿಜೆಪಿಗೆ ಬೈಯ್ಯುವ ಭರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಮತ್ತೊಮ್ಮೆ ಜಗಜ್ಜಾಹಿರುಗೊಳಿಸಿದ್ದಾರೆ. ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರುವದು ಇದೇ ಪ್ರಥಮವೇನಲ್ಲ ಎಂದಿದ್ದಾರೆ.
ಬಿಜೆಪಿಗೆ ಬೈಯ್ಯುವ ಭರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಮತ್ತೊಮ್ಮೆ ಜಗಜ್ಜಾಹಿರುಗೊಳಿಸಿದ್ದಾರೆ.
ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರುವದು ಇದೇ ಪ್ರಥಮವೇನಲ್ಲ.
1/n pic.twitter.com/Td7nk93e5A
— Nalinkumar Kateel (@nalinkateel) December 15, 2022
ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿತ್ತು. ನಾವು ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದನೆಯನ್ನು ಗುರಿಯಾಗಿಸಲು ಹೇಳಿದ್ದೆವು, ಆದ್ರೆ ಅವರು ನನ್ನನ್ನು ಟಾರ್ಗೆಟ್ ಮಾಡಿದ್ದರು. ಅವರಿಗೇ ಮತಬ್ಯಾಂಕ್ ರಾಜಕಾರಣವೇ ಮುಖ್ಯವಾಗಿತ್ತು ಎಂದು ಮಾನ್ಯ ಪ್ರಧಾನಿಯವರು ಸರಿಯಾಗಿಯೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿತ್ತು. ನಾವು ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದನೆಯನ್ನು ಗುರಿಯಾಗಿಸಲು ಹೇಳಿದ್ದೆವು, ಆದ್ರೆ ಅವರು ನನ್ನನ್ನು ಟಾರ್ಗೆಟ್ ಮಾಡಿದ್ದರು. ಅವರಿಗೇ ಮತಬ್ಯಾಂಕ್ ರಾಜಕಾರಣವೇ ಮುಖ್ಯವಾಗಿತ್ತು ಎಂದು ಮಾನ್ಯ ಪ್ರಧಾನಿಯವರು ಸರಿಯಾಗಿಯೇ ಹೇಳಿದ್ದಾರೆ.
3/n
— Nalinkumar Kateel (@nalinkateel) December 15, 2022