ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರದ ಮೋದಿ ಸರ್ಕಾರವು ದೇಶದಲ್ಲಿ ಕೃಷಿ ಕ್ಷೇತ್ರವನ್ನ ಉತ್ತೇಜಿಸಲು ಹಲವು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ, ರೈತರಿಗೆ ಸಹಾಯ ಮಾಡಲು ಭಾರತ ಸರ್ಕಾರವು ಫೆಬ್ರವರಿ 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನ ಪ್ರಾರಂಭಿಸಿದೆ. ತಲಾ 2,000 ರೂಪಾಯಿಯಂಯೆ ಮೂರು ಕಂತುಗಳಲ್ಲಿ ವರ್ಷಕ್ಕೆ ರೈತರಿಗೆ 6,000 ರೂಪಾಯಿ ಮೊತ್ತವನ್ನ ಠೇವಣಿ ಮಾಡಲಾಗುತ್ತಿದೆ. ಆದ್ರೆ, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಈ ಯೋಜನೆಯ ಭಾಗವಾಗಿ, ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನ ಪಡೆದಿದ್ದಾರೆ. ಈಗ ರೈತರು 13ನೇ ಕಂತು ಪಿಎಂ ಕಿಸಾನ್ ನಗದು ಹಣಕ್ಕಾಗಿ ಕಾಯುತ್ತಿದ್ದಾರೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಅಕ್ರಮಗಳನ್ನ ತಡೆಗಟ್ಟಲು ಕೇಂದ್ರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪಿಎಂ ಕಿಸಾನ್ ಯೋಜನೆಯ ಇತ್ತೀಚಿನ ಕಂತು ಪಡೆಯಲು, ಭೂಮಿ ಪ್ರಮಾಣಪತ್ರಗಳು, ಇ-ಕೆವೈಸಿ ಅಗತ್ಯವಿದೆ. ಇದನ್ನು ಮಾಡದಿದ್ದರೆ 13ನೇ ಕಂತಿನ ನಗದು ಪಡೆಯುವುದು ಕಷ್ಟವಾಗುತ್ತದೆ.
13ನೇ ಕಂತಿನ ಹಣವನ್ನು ಯಾರು ಪಡೆಯಲು ಸಾಧ್ಯವಿಲ್ಲ?
ಕೆಲವು ರೈತರು ಇಲ್ಲಿಯವರೆಗೆ ಭೂ ಪರಿಶೀಲನೆ – ಇ-ಕೆವೈಸಿ ಮಾಡದಿದ್ದರೆ, 13 ನೇ ಕಂತಿನ ನಗದು ಪಡೆಯುವುದು ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ..!
ಇದೇ ವೇಳೆ ಕೇಂದ್ರ ರೈತರಿಗಾಗಿ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದೆ. ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಫಲಾನುಭವಿಯ ಸ್ಥಿತಿಯನ್ನು ತಿಳಿಯಲು ನೀವು 155261 ಗೆ ಕರೆ ಮಾಡಬಹುದು.
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ, ಪ್ಯಾಸೆಂಜರ್ ಸ್ಪೆಷಲ್ ಸಮಯ ಪರಿಷ್ಕರಣೆ
BREAKING NEWS: ಜರ್ಮನಿಯಲ್ಲಿ ‘ಮೊಬೈಲ್ ಸ್ಪೋಟ’ಗೊಂಡು ಕರ್ನಾಟಕದ ವಿದ್ಯಾರ್ಥಿ ಸಾವು
‘ಮೃತ ದೇಹ’ದ ಸುತ್ತಲು ಜನ ಕೂರೋದ್ಹೇಕೆ ಗೊತ್ತಾ? ‘ಗರುಡ ಪುರಾಣ’ ಹೇಳೋದೇನು ನೋಡಿ.!