ಚಾಮರಾಜನಗರ: ಖತರ್ನಾಕ್ ಭೂಪನೊಬ್ಬ ಕೊತ್ತಂಬರಿ ಸೊಪ್ಪಿನ ಜೊತೆ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಬಂಧಿತನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಹನುಮಗೌಡ(40) ಎಂದು ಗುರುತಿಸಲಾಗಿದೆ.
ತರಕಾರಿ ಬೆಳೆಯುತ್ತೇನೆ ಎಂದು ಮಹಿಳೆಯೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಯಾರಿಗೂ ಅನುಮಾನ ಬಾರದಿರಲೆಂದು ಕೊತ್ತಂಬರಿ ಸೊಪ್ಪಿನ ಜೊತೆ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವಲಯದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಾನೂನಿನ ಪ್ರಕಾರ ಗಾಂಜಾ ಬೆಳೆಯುವುದು ಅಪರಾಧವಾಗಿದೆ.
Raisins Side Effects: ಒಣದ್ರಾಕ್ಷಿಯನ್ನು ಹೆಚ್ಚಾಗಿ ಸೇವಿಸಿದ್ರೆ ಈ ಸಮಸ್ಯೆಗಳು ಕಾಡಬಹುದು ; ಹಿತಮಿತವಾಗಿ ಸೇವಿಸಿ
BREAKING NEWS: ಜರ್ಮನಿಯಲ್ಲಿ ‘ಮೊಬೈಲ್ ಸ್ಪೋಟ’ಗೊಂಡು ಕರ್ನಾಟಕದ ವಿದ್ಯಾರ್ಥಿ ಸಾವು