ಬೆಂಗಳೂರು: ಕಾಳೇನು ಅಗ್ರಹಾರದ ಬಳಿಯಲ್ಲಿನ ನಮ್ಮ ಮೆಟ್ರೋ ( Namma Metro ) ಕಾಮಗಾರಿ ಹಿನ್ನಲೆಯಲ್ಲಿ, ದಿನಾಂಕ 19-12-2022ರಿಂದ ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಅಡ್ಡರಸ್ತೆಯ ಸಂಚಾರವನ್ನು ಮುಚ್ಚಲಾಗುತ್ತಿದೆ.
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ
ಈ ಕುರಿತಂತೆ ಬಿಎಂಆರ್ ಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಕಾರಣ, ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲೊಯೋಲಾ ಕಾಲೇಜು ಜಂಕ್ಷನ್ ನಲ್ಲಿರುವ ಕೊತ್ತನೂರು ಅಡ್ಡ ರಸ್ತೆಯ ಸಂಚಾರವನ್ನು ದಿನಾಂಕ 19-12-2022ರಿಂದ ಮುಚ್ಚಲಾಗುತ್ತದೆ ಎಂದಿದೆ.
BIGG NEWS : ಶಾರೀಖ್ ಕುರಿತು ಡಿಕೆಶಿ ಹೇಳಿಕೆಗೆ ಗೃಹ ಸಚಿವ ‘ಆರಗ ಜ್ಞಾನೇಂದ್ರ’ ಖಂಡನೆ
ಇನ್ನೂ ವಾಹನ ಸವಾರರು ಪರ್ಯಾಯ ಮಾರ್ಗವಾಗಿ ಬನ್ನೇರುಘಟ್ಟದಿಂದ ಕೊತ್ತನೂರು ಕಡೆಗೆ ಗೊಟ್ಟಿಗೆರೆಯಲ್ಲಿ ತಿರುವು ಪಡೆದು ಜಂಬೂ ಸವಾರಿ ದಿನ್ನೆ ಮೂಲಕ ಬಿ.ಕೆ ಸರ್ಕಲ್ ತಲುಪಬಹುದು. ಜಯದೇವ ಜಂಕ್ಷನ್ ನಿಂದ ಕೊತ್ತನೂರು ಕಡೆಗೆ ಸಂಚರಿಸುವವರು, ಅರೆಕೆರೆ ಜಂಕ್ಷನ್ ನಲ್ಲಿ ತಿರುವು ಪಡೆದು ಬ್ರಿಗೇಡ್ ಮಿಲೇನಿಯಂ ರಸ್ತೆ, ಆರ್ ಬಿಐ ಲೇಔಟ್ ಮೂಲಕ ಬಿ.ಕೆ ಸರ್ಕಲ್ ತಲುಪುವಂತೆ ತಿಳಿಸಿದೆ.