ಕೊಪ್ಪಳ : ಕಾಂಗ್ರೆಸ್ ಮನೆಗೆ ಬಾಗಿಲು, ಕಿಟಕಿ ಏನಿಲ್ಲ, ಬಟಾಬಯಲು ಎಂಬುದಾಗಿ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ಶಾಸಕ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ನಾನು ರೌಡಿ’ಕೊತ್ವಾಲ್’ ಶಿಷ್ಯ ಎನ್ನುವುದಕ್ಕೆ ದಾಖಲೆ ಏನಿದೆ..? : ಬಿಜೆಪಿಗೆ ಡಿಕೆಶಿ ತಿರುಗೇಟು
ಇಂದು ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಸರ್ವೋಚ್ಚ ನಾಯಕರು. ಅವರನ್ನು ಮುಂದಿಟ್ಟುಕೊಂಡೇ ಎಲ್ಲಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಅವರ ಆಶೀರ್ವಾದ ನಮಗಿದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದಾರೆ ಎಂದರು.
ಶಾಲೆ, ಕಾಲೇಜುಗಳಲ್ಲಿ ಹಣಕಾಸು ನಿರ್ವಹಣೆ, ಅರ್ಥಿಕ ಸಾಕ್ಷರತೆಯನ್ನು ಶಿಕ್ಷಣದ ಭಾಗವಾಗಿ- ಸಂಸದ ತೇಜಸ್ವೀ ಸೂರ್ಯ ಒತ್ತಾಯ
ತಮ್ಮ ಹಾಗೂ ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಮ್ಮದು ತಂದೆ ಮಕ್ಕಳ ಸಂಬಂಧ. ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಅದು ಬರುವುದಿಲ್ಲ. ನಿರೀಕ್ಷೆ ಮಾಡುವವರಿಗೆ ನಿರಾಸೆಯಾಗುತ್ತದೆ ಎಂದರು.
2023 Election: ನಮ್ಮ ಸರ್ವೇ ಕ್ಲಿಯರ್, ನಾವು 136 ಸೀಟ್ ಗೆಲ್ಲುತ್ತೇವೆ, ಬಿಜೆಪಿ 60 ರಿಂದ 65 ಸ್ಥಾನ ಗೆಲುವು – DKS
ಯಡಿಯೂರಪ್ಪ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲವೆಂಬ ಕಾರಣಕ್ಕೆ ಅವರು ಮುನಿಸಿಕೊಂಡಿರುವುದು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.