ನವದೆಹಲಿ: ಶಾಲೆ ಮತ್ತು ಕಾಲೇಜುಗಳಲ್ಲಿ ಹಣಕಾಸು ನಿರ್ವಹಣೆ, ಅರ್ಥಿಕ ಸಾಕ್ಷರತೆ ವಿಷಯಗಳಿಗೆ ಒತ್ತು ನೀಡುವಂತೆ ಸಂಸತ್ತಿನಲ್ಲಿ ಸರ್ಕಾರವನ್ನು ಒತ್ತಾಯಿಸಿರುವ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು, ಯುವ ಜನತೆಯ ಭವಿಷ್ಯದ ಆರ್ಥಿಕ ಸುರಕ್ಷತೆಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಈ ವಿಷಯದ ಕುರಿತು ಸಂಸತ್ತಿನ ಗಮನ ಸೆಳೆದಿರುವ ಸಂಸದರು, “ಭಾರತದ ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಔದ್ಯೋಗಿಕ ರಂಗದಲ್ಲಿ ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅರ್ಥಿಕ ಸಾಕ್ಷರತೆಯು ಅವರಲ್ಲಿ ಭವಿಷ್ಯದ ಹಣಕಾಸು ನಿರ್ವಹಣೆಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಸಾಲದ ಸುಳಿ, ನಕಲಿ,ಹಣಕಾಸು ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ” ಎಂದು ತಿಳಿಸಿದರು.
WATCH VIDEO: 50 ವರ್ಷದ ತಾಯಿಗೆ ಮರುಮದುವೆ ಮಾಡಿಸಿದ ಮಗಳು… ಹೃದಯಸ್ಪರ್ಶಿ ವಿಡಿಯೋ ವೈರಲ್
ಸಾಂಪ್ರದಾಯಿಕ ಪಿಂಚಣಿ ಪದ್ಧತಿಯ ಅನುಪಸ್ಥಿತಿಯಲ್ಲಿರುವ ಪ್ರಸ್ತುತ ಯುವ ನೌಕರರು ತಮ್ಮ ಭವಿಷ್ಯದ, ನಿವೃತ್ತಿ ನಂತರದ ಜೀವನಕ್ಕೆ ಮ್ಯೂಚುವಲ್ ಫಂಡ್ಸ್, ಹೂಡಿಕೆ, ಬ್ಯಾಂಕಿಂಗ್ ಜ್ಞಾನ ಹೊಂದುವುದು ಇಂದಿನ ಅಗತ್ಯತೆಗಳಲ್ಲೊಂದು ಎಂದು ಹೇಳಿದರು.
” ಹೆಚ್ಚಿನ ಪ್ರಮಾಣದಲ್ಲಿ ಯುವಜನತೆ ಸಾಮಾನ್ಯ ಹಣಕಾಸು ನಿರ್ವಹಣೆಯ ಜ್ಞಾನ, ಹಣದ ಮಹತ್ವ, ಉಳಿತಾಯ, ವಿಮೆ, ನಿವೃತ್ತಿ ನಂತರದ ಜೀವನ ನಿರ್ವಹಣೆ ಕುರಿತಾಗಿ ಸಮರ್ಪಕ ಮಾಹಿತಿಯ ಕೊರತೆಯಿಂದ ಇರುವುದು ವೇದ್ಯ ಸಂಗತಿ.ಇಂತಹ ಸನ್ನಿವೇಶಗಳಲ್ಲಿ ನಕಲಿ, ವಂಚನೆಗೆ ಒಳಗಾಗುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಅಂಶ. ಇದರಿಂದ ಆರ್ಥಿಕ ಸಾಕ್ಷರತೆ, ಹಣಕಾಸು ನಿರ್ವಹಣೆ ಬಗೆಗಿನ ಜ್ಞಾನ ಶಾಲೆ ಮತ್ತು ಕಾಲೇಜುಗಳಲ್ಲಿ ಅತ್ಯವಶ್ಯಕ. ಉತ್ತಮ ಜೀವನ ನಿರ್ವಹಣೆಗೆ ಇದರಿಂದ ಅನುಕೂಲವಾಗಲಿದ್ದು, ಅರ್ಥಿಕ ಸಾಕ್ಷರತೆಯನ್ನು ಶೈಕ್ಷಣಿಕ ಭಾಗವಹಿಸುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ” ಎಂದು ವಿವರಿಸಿದರು.
2023 Election: ನಮ್ಮ ಸರ್ವೇ ಕ್ಲಿಯರ್, ನಾವು 136 ಸೀಟ್ ಗೆಲ್ಲುತ್ತೇವೆ, ಬಿಜೆಪಿ 60 ರಿಂದ 65 ಸ್ಥಾನ ಗೆಲುವು – DKS