ಬೆಂಗಳೂರು: ಅನೈತಿಕ ಸಂಬಂಧ ಸಾಭೀತಿಗೆ ಮೂರನೇ ವ್ಯಕ್ತಿಯ ಖಾಸಗೀತನಕ್ಕೆ ಧಕ್ಕೆ ಸರಿಯಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಇಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಗೆ ಅನೈತಿಕ ಸಂಬಂಧದ ಕಾರಣ ಪ್ರಿಯಕರನ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು.
ಪತ್ನಿಯಿಂದ ವಿಚ್ಥೇಧನ ಕೋರಿ ಅರ್ಜಿಯನ್ನು ಸಲ್ಲಿಸಿದ್ದ ಪತ್ನಿಯ ಅರ್ಜಿಯನ್ನು ಕೌಟಂಬಿಕ ನ್ಯಾಯಾಲಯವು ಒಪ್ಪಿತ್ತು. ಈ ವೇಳೆ ಪ್ರಿಯಕರನೊಂದಿಗೆ ಪತ್ನಿಗೆ ಅಕ್ರಮ ಸಂಬಂಧವಿರುವುದಾಗಿ ಹೇಳಿದ್ದನು. ಅಲ್ಲದೇ ಪ್ರಿಯಕರನ ಮೊಬೈಲ್ ಟವರ್ ಮಾಹಿತಿಯನ್ನು ಪಡೆಯುವಂತೆ ಅರ್ಜಿ ಸಲ್ಲಿಸಿದ್ದನು.
ಕೌಟಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದಂತ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿತ್ತು. ಅಲ್ಲದೇ ಪ್ರಿಯಕರನ ಮೊಬೈಲ್ ಟವರ್ ಮಾಹಿತಿಯನ್ನು ನೀಡುವಂತೆಯೂ ಮೊಬೈಲ್ ಕಂಪನಿಗೆ ಸೂಚಿಸಿತ್ತು. ಆದ್ರೇ ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಪ್ರಿಯಕರ ಅರ್ಜಿ ಸಲ್ಲಿಸಿದ್ದನು.
BIG NEWS: ನಾವು ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ- ಸಿದ್ಧರಾಮಯ್ಯ ಘೋಷಣೆ
ವಿಚ್ಛೇದನ ಕೇಸ್ ನಲ್ಲಿ ಪ್ರತಿವಾಧಿಯಾಗಿಲ್ಲದಿದ್ದರೂ ಹೈಕೋರ್ಟ್ ಇಂದು ಇಂತಹ ಅರ್ಜಿಯನ್ನು ವಿಚಾರಣೆ ನಡೆಸಿತು. ನ್ಯಾಯಾಲಯದ ಮುಂದೆ ತನ್ನ ಮೊಬೈಲ್ ಟವರ್ ಮಾಹಿತಿಯನ್ನು ಪಡೆಯುವುದು ಖಾಸಗಿ ತನಕ್ಕೆ ಧಕ್ಕೆ. ಹೀಗಾಗಿ ಕೌಟಂಬಿಕ ನ್ಯಾಯಾಲಯ ಆದೇಶ ರದ್ದು ಪಡಿಸುವಂತೆ ಕೋರಿದ್ದನು.
ಈ ಅರ್ಜಿ ವಿಚಾರಣೆ ನಡೆಸಿದಂತ ಹೈಕೋರ್ಟ್, ಪತಿ ಆರೋಪಿಸದಕ್ಕೆ ಮೂರನೇ ವ್ಯಕ್ತಿಯ ಟವರ್ ಮಾಹಿತಿ ಕೇಳುವುದು ಸರಿಯಲ್ಲ. ಪ್ರತಿ ನಾಗರೀಕನಿಗೂ ಖಾಸಗಿ ತನ ಕಾಪಾಡಿಕೊಳ್ಳುವ ಹಕ್ಕಿದೆ ಎಂಬುದಾಗಿ ಅಭಿಪ್ರಾಯಪಟ್ಟು, ಪ್ರಿಯಕರನ ಮೊಬೈಲ್ ಟವರ್ ಮಾಹಿತಿ ನೀಡಲು ಸೂಚಿಸಿದ್ದಂತ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿತು.