ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಎರಡಕ್ಕಿಂತ ಹೆಚ್ಚು ಸಿಮ್ ಕಾರ್ಡ್ಗಳನ್ನ ಬಳಸುತ್ತಿದ್ದೀರಾ? ಹಾಗಿದ್ರೆ, ಈ ವಿಷಯಗಳನ್ನ ನೆನಪಿಡಿ. ನೀವೇನಾದ್ರೂ ಇವುಗಳನ್ನ ಮರೆತರೆ ನಿಮ್ಮ ಸಿಮ್ ಕಾರ್ಡ್ ನಿಮ್ಮನ್ನ ಜೈಲಿಗೆ ಕಳುಹಿಸೋದು ಗ್ಯಾರೆಂಟಿ. ಅದ್ಹೇಗೆ.? ಆ ತಪ್ಪುಗಳಾದ್ರು ಯಾವು.? ಮುಂದೆ ಓದಿ.
ನೀವು ತಿಳಿಯಲೇ ಬೇಕಾದ ಮೊದಲ ವಿಷಯವೆಂದ್ರೆ, ನಿಮ್ಮ ಸಿಮ್ ಕಾರ್ಡ್ ಇತರರ ಕೈಗೆ ಬೀಳದಂತೆ ಎಚ್ಚರವಹಿಸಬೇಕು. ಹೌದು, ಅದು ಸಂಭವಿಸಿದಲ್ಲಿ, ಸಿಮ್ ಕಾರ್ಡ್ ಖಂಡಿತವಾಗಿಯೂ ದುರ್ಬಳಕೆಯಾಗುತ್ತದೆ. ಆ ಸಿಮ್ ಕಾರ್ಡ್ ಮೂಲಕವೂ ವಂಚನೆ ಮಾಡಬಹುದಾಗಿದ್ದು, ನಿಮ್ಮ ಮೊಬೈಲ್ ನಂಬರ್’ನಲ್ಲಿ ವಂಚನೆ ನಡೆದ್ರೆ ನೀವು ಜೈಲು ಸೇರಬೇಕಾಗುತ್ತೆ.
ಕೆಲವರು ತಮ್ಮ ಫೋನ್ನಲ್ಲಿರುವ ಸಿಮ್ ಕಾರ್ಡ್ ಕೆಲಸ ಮಾಡುತ್ತಿಲ್ಲ ಎಂದು ಅದನ್ನ ಬೇರೆಯವರ ಮೊಬೈಲ್’ಗೆ ಹಾಕುತ್ತಾರೆ. ಇದರಿಂದ ಆ ಜನರು ನಿಮ್ಮ ಸಿಮ್ನ ನಕಲು ಅಥವಾ ಕ್ಲೋನ್ ಮಾಡಬಹುದು ಮತ್ತು ಅದನ್ನ ದುರುದ್ದೇಶಪೂರಿತ ಚಟುವಟಿಕೆಗಳಿಗೆ ಬಳಸಬಹುದು. ಹಾಗೆಯೇ ನೀವು ಒಂದಕ್ಕಿಂತ ಹೆಚ್ಚು ಸಿಮ್ಗಳನ್ನ ಹೊಂದಿದ್ರೆ, ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಬೇರೆಯವರ ಕೈಗೆ ಸಿಕ್ಕರೆ ಖಂಡಿತಾ ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುತ್ತಾರೆ. ಆದ್ದರಿಂದ ನೀವು ಜೈಲಿಗೆ ಹೋಗಬಹುದು.
ಇನ್ನು ನಿಮ್ಮ ಸಿಮ್ ಕಾರ್ಡ್ ತಪ್ಪು ಕೈಗಳಿಗೆ ಸಿಕ್ಕರೇ ಆ ವ್ಯಕ್ತಿಅದರ ಮೂಲಕ ಬೇರೊಬ್ಬರಿಗೆ ಬೆದರಿಕೆ ಸಂದೇಶಗಳನ್ನ ಅಥವಾ ಕರೆಗಳನ್ನು ಕಳುಹಿಸಬಹುದು. ಆ ಅಪರಾಧ ನಿಮ್ಮ ಮೇಲೆ ಬಂದು ನೀವು ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು. ಆದ್ದರಿಂದ ನಿಮ್ಮ ಸಿಮ್ ಕಳೆದುಹೋದ ತಕ್ಷಣ, ಅದರ ಬಗ್ಗೆ ದೂರು ನೀಡಿ. ಅದನ್ನ ನಿರ್ಬಂಧಿಸಿ. ಆಗ ಮಾತ್ರ ನೀವು ಸುರಕ್ಷಿತವಾಗಿರಲು ಸಾಧ್ಯ.
BIGG NEWS : ‘ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲು’ : ಸಿಎಂ ಬೊಮ್ಮಾಯಿ ಘೋಷಣೆ
VIRAL NEWS: ಈ ಶಾಲೆಯಲ್ಲಿ ಸೀರೆ ಹಿಂದೆ ಶೌಚಾಲಯಕ್ಕೆ ಹೋಗುವ ವಿದ್ಯಾರ್ಥಿಗಳು | watch video
ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್: ಪೆನ್ನಾರ್ ನದಿ ನೀರು ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಆದೇಶ