ಉತ್ತರ ಪ್ರದೇಶ: 45 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ತನ್ನ ಮನೆಯ ಹಾಸಿಗೆಯ ಕೆಳಗೆ ಐದು ದಿನಗಳ ಕಾಲ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಹಬಾಜ್ಗಂಜ್ನಲ್ಲಿ ನಡೆದಿದೆ.
ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ಬಂದು ಪರಿಶೀಲಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತರನ್ನು ಶಾಂತಿ ದೇವಿ ಎಂದು ಗುರುತಿಸಲಾಗಿದ್ದು, ಅವರು ನಿವೃತ್ತ ಶಿಕ್ಷಕಿಯಾಗಿದ್ದರು. ಈಕೆಗೆ ನಿಖಿಲ್ ಮಿಶ್ರಾ ಡಬ್ಬು ಎಂಬ ಏಕೈಕ ಪುತ್ರನಿದ್ದಾನೆ.
ನೆರೆಹೊರೆಯವರ ಪ್ರಕಾರ, ನಿಖಿಲ್ ಮದ್ಯವ್ಯಸನಿಯಾಗಿದ್ದು, ಹಣಕ್ಕಾಗಿ ತನ್ನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು ಎಂದಿದ್ದಾರೆ.
ಶವವನ್ನು ಮರೆಮಾಚಲು ಕಾರಣವೇನು ಎಂದು ಪೊಲೀಸರು ಕೇಳಿದಾಗ, ನಿಖಿಲ್ ಆಕೆಯ ಅಂತ್ಯಕ್ರಿಯೆಗೆ ತನ್ನ ಬಳಿ ಹಣವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ನಿಖಿಲ್ ಅವರ ಪತ್ನಿ ಮತ್ತು ಅವರ ಮಗ ಸಹ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, 15 ದಿನಗಳ ಹಿಂದೆ, ಅವನ ಹೆಂಡತಿ ನಿಖಿಲ್ ವರ್ತನೆಯಿಂದ ಬೇಸತ್ತು ತನ್ನ ಮಗನನ್ನು ಕರೆದುಕೊಂಡು ತನ್ನ ತಂದೆಯ ಮನೆಗೆ ಹೋಗಿದ್ದಳು. ಮನೆಯ ಕೆಲವು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು. ಆದರೆ, ನಿಖಿಲ್ನ ಕೆಟ್ಟ ನಡವಳಿಕೆಯಿಂದ ಬಾಡಿಗೆದಾರರು ಸಹ ಒಂದು ತಿಂಗಳ ಹಿಂದೆ ಮನೆ ತೊರೆದರು ಎಂದು ತಿಳಿದುಬಂದಿದೆ.
ನಿಖಿಲ್ ಮಾನಸಿಕವಾಗಿ ಅಸ್ಥಿರ ಮತ್ತು ಮದ್ಯವ್ಯಸನಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಉತ್ತರ ಎಸ್ಪಿ ಮನೋಜ್ ಕುಮಾರ್ ಅವಸ್ತಿ ಹೇಳಿದ್ದಾರೆ. “ನಾವು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸುವ ಮೊದಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
Interview Tips : ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದೀರಾ ? ಇಲ್ಲಿವೆ ಸಿಂಪಲ್ ಟಿಪ್ಸ್
Interview Tips : ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದೀರಾ ? ಇಲ್ಲಿವೆ ಸಿಂಪಲ್ ಟಿಪ್ಸ್