ಚಿತ್ರದುರ್ಗ : ತೆಂಗು ಅಭಿವೃದ್ಧಿ ಮಂಡಳಿಯು ನ್ಯೂ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಸಹಯೋಗದೊಂದಿಗೆ ತೆಂಗಿನ ಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತ ರೂ. ಐದು ಲಕ್ಷ ರೂಪಾಯಿಗಳವರೆಗೆ ಇದ್ದು, ಆಕಸ್ಮಿಕ ಸಾವು ಸೇರಿದಂತೆ 24 ಗಂಟೆಗಳ ಅಪಘಾತ ಸಂಬಂಧಿತ ಅಪಾಯದ ವಿರುದ್ಧ ಮತ್ತು ಆಸ್ಪತ್ರೆಗೆ ದಾಖಲಾಗಲು ರೂ.ಒಂದು ಲಕ್ಷ ರೂಪಾಯಿಗಳವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ತೆಂಗು ಅಭಿವೃದ್ಧಿ ಮಂಡಳಿಯು ತನ್ನ ತೆಂಗಿನ ಮರಗಳ ಸ್ನೇಹಿತರು ಮತ್ತು ನೀರಾ ತಂತ್ರಜ್ಞರ ತರಬೇತಿ ಕಾರ್ಯಕ್ರಮಗಳ ಅಡಿಯಲ್ಲಿ ಎಲ್ಲಾ ತರಬೇತುದಾರರಿಗೆ ಒಂದು ವರ್ಷದ ಉಚಿತ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
ಪಾಲಿಸಿಯ ಅಡಿಯಲ್ಲಿ ವಾರ್ಷಿಕ ಪ್ರೀಮಿಯಂ ರೂ.375/- ಆಗಿದ್ದು, ಇದರಲ್ಲಿ ಪ್ರೀಮಿಯಂ ಪಾಲು ರೂ.281/- ನ್ನು ಮಂಡಳಿಯು ಭರಿಸಲಿದೆ. ಆಸಕ್ತ ಫಲಾನುಭವಿಗಳು ರೂ.94/- ಮಾತ್ರ ಪಾವತಿಸುವ ಮೂಲಕ ವಿಮಾ ರಕ್ಷಣೆಯನ್ನು ನವೀಕರಿಸಬಹುದು. 18 ರಿಂದ 65 ವರ್ಷ ವಯಸ್ಸಿನ ಸಾಂಪ್ರಾದಾಯಿಕವಾಗಿ ತೆಂಗಿನ ಮರ ಹತ್ತುವವರು ವಾರ್ಷಿಕ ಪ್ರೀಮಿಯಂ ರೂ.94/- ಫಲಾನುಭವಿ ಪಾಲನ್ನು ಪಾವತಿಸುವ ಮೂಲಕ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
BIGG NEWS : ಹಾಡಹಗಲೇ ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ : ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಪ್ರಿಮಿಯಂ ಪಾವತಿಯನ್ನು ಆನ್ಲೈನ್ ಮೂಲಕ ಮಾಡಬಹುದು. ರೂ.94/-ರ ಡಿಮ್ಯಾಂಡ್ ಡ್ರಾಫ್ಟ್ನ್ನು ತೆಂಗು ಅಭಿವೃದ್ಧಿ ಮಂಡಳಿಯ ಪರವಾಗಿ ಎರ್ನಾಕುಲಂನಲ್ಲಿ ಪಾವತಿಸುವಂತೆ ಕಳುಹಿಸಬಹುದು. ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಕೃಷಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು, ಸಿಪಿಎಫ್ ಪದಾಧಿಕಾರಿಗಳು, ಸಿಪಿಸಿ ನಿರ್ದೇಶಕರಿಂದ ಮೇಲುರುಜು ಮಾಡಿಸಿ ಪ್ರೀಮಿಯಂ ಪಾಲು ಪಾವತಿಸಿದ ದಾಖಲೆ ಮತ್ತು ವಯಸ್ಸಿನ ಪುರಾವೆಗಳೊಂದಿಗೆ ಅಧ್ಯಕ್ಷರು, ತೆಂಗು ಅಭಿವೃದ್ದಿ ಮಂಡಳಿ, ಎಸ್.ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ-682011, ಕೇರಳಕ್ಕೆ ಕಳುಹಿಸಬಹುದು. ಅರ್ಜಿ ನಮೂನೆ, ಮನವಿ ನಮೂನೆ ಮತ್ತು ಇತರ ವಿವರಗಳು ಮಂಡಳಿಯ ಜಾಲತಾಣ www.coconutboard.gov.in ನಲ್ಲಿ ಲಭ್ಯವಿದೆ. ದೂರವಾಣಿ ಸಂಖ್ಯೆ 0484-2377266/255 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.