ಕಲಬುರಗಿ : ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಮುನಿಸು ಇಲ್ಲ. ಆದರೆ ಬಿಜೆಪಿ ಮನೆಯೊಂದು ನೂರು ಬಾಗಿಲು ಆಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
BIGG NEWS: ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲಿ ಚೀನಾದಿಂದ ದ್ವಿ ಬಳಕೆಯ ವಿಮಾನ ನಿಲ್ದಾಣ ನಿರ್ಮಾಣ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಮುನಿಸು ಇಲ್ಲ.ಆದರೆ ಬಿಜೆಪಿಯಲ್ಲಿ ಮನೆಯೊಂದು ನೂರು ಬಾಗಿಲು ಆಗಿದೆ. ಯಡಿಯೂರಪ್ಪನವರೇ ಜನಸ್ಪಂದನಾ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ನಿಜವಾಗಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಬಿಜೆಪಿಯಲ್ಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
BIGG NEWS: ಹೊಸ ವರ್ಷಕ್ಕೆ ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ; ಪೊಲೀಸ್ ಇಲಾಖೆಗೆ ಮನವಿ
ರಾಜ್ಯದಲ್ಲಿ ಪೊಪೆಟ್ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಕರೆಯುತ್ತಾರೆ. ಸ್ವಂತ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ನಡ್ಡಾ ವಿಫಲರಾಗಿದ್ದಾರೆ.ಬಿಜೆಪಿಗೆ ಧೈರ್ಯ ಇದ್ರೆ ಬಸವರಾಜ ಬೊಮ್ಮಾಯಿ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.