ಬಿಹಾರ: ನಕಲಿ ಮದ್ಯ ಸೇವಿಸಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಛಾಪ್ರಾದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.
ವಿಷಪೂರಿತ ಮದ್ಯ ಸೇವಿಸಿ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಸುವಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ದೋಯಿಲಾ ಗ್ರಾಮದಲ್ಲಿ ಮತ್ತು ಮಶ್ರಕ್ ಪೊಲೀಸ್ ಠಾಣೆ ವ್ಯಾಪ್ತಿಯ ಯದು ಮೋರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಮೂವರು ಸಾವನ್ನಪ್ಪಿದರೆ, ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ.
Bihar | 3 people died after allegedly consuming spurious liquor in Chhapra area of Saran district.
3 died, bodies sent for postmortem, these look like suspicious deaths. I have also received information that some more are receiving treatment at different places: S Kumar, SP pic.twitter.com/J3o0Nud6hd
— ANI (@ANI) December 14, 2022
ಮೃತರನ್ನು ಸಂಜಯ್ ಸಿಂಗ್, ಹರಿಂದರ್ ರಾಮ್, ಕುನಾಲ್ ಸಿಂಗ್ ಮತ್ತು ಅಮಿತ್ ರಂಜನ್ ಎಂದು ಗುರುತಿಸಲಾಗಿದ್ದು, ಅವರು ನಕಲಿ ಮದ್ಯ ಸೇವಿಸಿದ ನಂತ್ರ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
WATCH VIDEO: 20 ಬಾರಿ ಬೈಸ್ಕೆ ಹೊಡೆದರೆ ಈ ದೇಶದಲ್ಲಿ ಸಿಗುತ್ತೆ ಫ್ರೀ ಬಸ್ ಟಿಕೆಟ್!… ಎಲ್ಲಿ ಗೊತ್ತಾ?
WATCH VIDEO: 20 ಬಾರಿ ಬೈಸ್ಕೆ ಹೊಡೆದರೆ ಈ ದೇಶದಲ್ಲಿ ಸಿಗುತ್ತೆ ಫ್ರೀ ಬಸ್ ಟಿಕೆಟ್!… ಎಲ್ಲಿ ಗೊತ್ತಾ?