ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆರ್ಭಟ ಬೆನ್ನಲ್ಲೆ ಇದೀಗ ಮತ್ತೊಂದು ಹೊಸ ಆತಂಕ ಸೃಷ್ಟಿಯಾಗಿದ್ದು, ಚಳಿಗಾಲ ಆರಂಭವಾಗುತ್ತಿದ್ದಂತೆ ಹವಮಾನದಲ್ಲಿ ಬದಲಾವಣೆಯಾಗುತ್ತಿದ್ದಂತೆ ಆರೋಗ್ಯದಲ್ಲೂ ಸಣ್ಣ ಬದಲಾವಣೆಯಾಗುತ್ತಿದೆ. ಅದರಲ್ಲೂ ಇದೀಗ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬ್ಲೂಫೀವರ್ ಹೆಚ್ಚಳವಾಗಿದೆ. ಈ ಅಘಾತಕಾರಿ ಜ್ವರದ ಲಕ್ಷಣಗಳು ಕಾಣಿಸಿಕೊಂಡರೇ ಎಚ್ಚರ ವಹಿಸೋದು ಅತ್ಯಗತ್ಯವಾಗಿದೆ. ಅರೇ ಏನಿದು ಬ್ಲೂ ಫೀವರ್ ಅಂತಾ ಯೋಚಿಸುತ್ತಿದೀರಾ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದ ಓದಿ
ಏನಿದು ಬ್ಲೂ ಫೀವರ್ ?
ಚಳಿ ಮಳೆಯ ಅವಾಂತರದಿಂದ ಮಕ್ಕಳಲ್ಲಿ ಹೆಚ್ಚಾಗಿ ಶೀತ ತಲೆನೋವು ಜ್ವರ ಕಾಣಿಸುತ್ತಿದ್ದು, ಆಸ್ಪತ್ರೆಗೆ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಅಪ್ಪಿತಪ್ಪಿಯೂ ನಿರ್ಲಕ್ಷ್ಯಿಸದಿರಿ, ಯಾಕೆಂದ್ರೆ ಇದೀಗ ಹೊಸ ರೋಗವೊಂದು ಎಂಟ್ರಿಯಾಗಿದ್ದು, ಸಿಟಿ ಜನರನ್ನು ಬೆಚ್ಚಿಬೀಳುವಂತಾಗಿದೆ
ಬ್ಲೂ ಫೀವರ್. ರಾಕಿ ಮೌಂಟೇನ್ ಸ್ಪಾಟೆಡ್ ಫೀವರ್ ಎಂದು ಕರೆಸಿಕೊಳ್ಳುವ ಈ ಬ್ಲೂ ಫೀವರ್ ಅಮೆರಿಕಾ, ಕೆನಾಡದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಪ್ರಾಣಿಗಳ ಉಣ್ಣೆಯಿಂದ ಇದು ಹರಡುವ ಸಾಧ್ಯತೆಯಿರುತ್ತದೆ. ನಾಯಿಗಳ ಟಿಕ್ ಫೀವರ್ನಿಂದ ಸೋಂಕು ಹರಡುವ ಸಾಧ್ಯತೆಯಿದೆ.
ಸಣ್ಣ ವಯಸ್ಸಿನ ಮಕ್ಕಳಿಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದು ಮಕ್ಕಳ ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯವಹಿಸದಿರಿ. ಬೆಂಗಳೂರಿನಲ್ಲಿ ಇದೀಗ ಗಲ್ಲಿ ಗಲ್ಲಿಯಲ್ಲಿ ಮನೆಗೊಬ್ಬರಂತೆ ಬ್ಲೂ ಫೀವರ್ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಬ್ಲೂ ಫೀವರ್ ಗುಣಲಕ್ಷಣಗಳೇನು ಗೊತ್ತಾ?
1. ತಲೆ ನೋವು
2. ಜ್ವರ
3. ಸುಸ್ತು
4. ಶೀತ
5. ಕಣ್ಣು ಕೆಂಪು
6. ಮೈ ಕೈ ನೋವು
7. ಮಂಡಿ ನೋವು
ಬ್ಲೂ ಫೀವರ್ ತೀವ್ರಗೊಂಡು ಬಳಲುತ್ತಿದ್ದಂತೆ ಗಂಭೀರ ಸ್ವರೂಪ ಪಡೆಯುತ್ತದೆ. ಜತೆಗೆ ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರಾದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕರಾದ ಡಾ. ಸಂಜಯ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕರಾದ ಡಾ ನಾಗರಾಜ್ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಹವಾಮಾನ ವೈಪರಿತ್ಯದ ಸಮಯದಲ್ಲಿ ಮಕ್ಕಳ ಬಗ್ಗೆ ಅತಿಯಾಗಿ ಕಾಳಜಿ ವಹಿಸುವು ಅತ್ಯಗತ್ಯವಾಗಿದೆ. ಪುಟಾಣಿ ಮಕ್ಕಳು ಬ್ಲೂ ಫೀವರ್ ಸೋಂಕಿಗೆ ಒಳಗಾಗದಂತೆ ಜಾಗೃತೆ ವಹಿಸಬೇಕಾಗಿದೆ