ಇಂಗ್ಲೆಂಡ್ : ಇಂಗ್ಲೆಂಡ್ನ ಜನಪ್ರಿಯ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ಅವರಿದ್ದ ಕಾರು ಭೀಕರ ರಸ್ತೆ ಅಪಘಾತಕ್ಕೊಳಗಾಗಿದ್ದು, ಗಾಯಗೊಂಡ ಆಂಡ್ರ್ಯೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಜನಪ್ರಿಯ ಬಿಬಿಸಿ (BBC)ಯ ಟೆಲಿವಿಷನ್ ಶೋ “ಟಾಪ್ ಗೇರ್” ಕಾರ್ಯಕ್ರಮದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಗಾಯಗೊಂಡ ಆಂಡ್ರ್ಯೂ ಅವರಿಗೆ ಸೆಟ್ನಲ್ಲಿದ್ದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದರು. ಆದ್ರೂ, ಹೆಚ್ಚಿನ ಆರೈಕೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶೀಘ್ರದಲ್ಲೇ ಆಂಡ್ರ್ಯೂ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಬಿಸಿಸಿ ಮಾಹಿತಿ ನೀಡಿದೆ.
ಆಂಡ್ರ್ಯೂ ಅವರು ತಮಮ ವೃತ್ತಿ ಜೀವನದಲ್ಲಿ ಇಂಗ್ಲೆಂಡ್ ಪರ 79 ಟೆಸ್ಟ್ ಮತ್ತು 141 ಸೀಮಿತ ಓವರ್ ಪಂದ್ಯಗಳನ್ನು ಆಡಿದ್ದು, 2009 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. 2005 ರ ಆಶಸ್ ಸರಣಿ ಗೆಲ್ಲುವಲ್ಲಿ ಆಂಡ್ರ್ಯೂ ಪ್ರಮುಖ ಪಾತ್ರ ವಹಿಸಿದರು.
The Sun headline making fun of the fact Freddie Flintoff has been flown to hospital after a serious crash!?? Disgusting. pic.twitter.com/GyUpDwYbR4
— Jay White (@jaywhite_1) December 13, 2022
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ RBI ಮಾಜಿ ಗವರ್ನರ್ ʻರಘುರಾಮ್ ರಾಜನ್ʼ | WATCH VIDEO
BIG NEWS : ʻಉತ್ತರ ಪ್ರದೇಶ ಭಾರತದ ಆರ್ಥಿಕ ಶಕ್ತಿ ಕೇಂದ್ರವಾಗಲಿದೆʼ: ಅಮೆರಿಕದ ಭಾರತೀಯ ರಾಯಭಾರಿ ಸಂಧು
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ RBI ಮಾಜಿ ಗವರ್ನರ್ ʻರಘುರಾಮ್ ರಾಜನ್ʼ | WATCH VIDEO