ಬೆಂಗಳೂರು: ಮಾಂಡೌಸ್ ಚಂಡಮಾರುತ ಪರಿಣಾಮವಾಗಿ ರಾಜ್ಯದಲ್ಲಿ ನಿರಂತರ ಮಳೆಗೆ ಸುರಿಯುತ್ತಿದೆ. ಹೀಗಾಗಿ ತರಕಾರಿ ಬೆಲೆ ದಿಢೀರನೇ ಏರಿಕೆಯಾಗಿದೆ ಹಾಗೂ ಹೂವುಗಳ ದರ ಕುಸಿದಿದೆ.
BIGG NEWS: ಗುಜರಾತ್ ಮಾದರಿಯಂತೆ ರಾಜ್ಯದಲ್ಲಿ ಟಿಕೆಟ್ ಹಂಚಿಕೆಯಾಗಲಿದೆ; ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿ ತರಕಾರಿ ಮೇಲೆ ಶೇ.15 ರಿಂದ 20ರಷ್ಟು ದರ ಏರಿಕೆ ಮಾಡಲಾಗಿದೆ. ಮಳೆ ಹೀಗೆ ಮುಂದುವರಿದ್ರೆ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ತರಕಾರಿ ದರ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಮಳೆಯಿಂದಾಗಿ ರೈತರು ಬೆಳೆದ ಬೆಳೆ ಹೊಲದಲ್ಲೇ ನಾಶವಾಗುತ್ತಿದೆ. ಉತ್ತಮ ಗುಣಮಟ್ಟದ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
BIGG NEWS: ಗುಜರಾತ್ ಮಾದರಿಯಂತೆ ರಾಜ್ಯದಲ್ಲಿ ಟಿಕೆಟ್ ಹಂಚಿಕೆಯಾಗಲಿದೆ; ಬಸನಗೌಡ ಪಾಟೀಲ್ ಯತ್ನಾಳ್
ತರಕಾರಿ ದರ ಎಷ್ಟು?
ಟೊಮ್ಯಾಟೊ 15 ರಿಂದ 27 ರೂ.
ಕ್ಯಾರೆಟ್ 55 ರಿಂದ 60 ರೂ.
ಬೀನ್ಸ್ 22 ರಿಂದ 45 ರೂ.
ಹಸಿಮೆಣಸಿನಕಾಯಿ 56 ರಿಂದ 76 ರೂ.
ಮೂಲಂಗಿ 28 ರಿಂದ 32 ರೂ.
ಸೌತೇಕಾಯಿ 22 ರಿಂದ 43 ರೂ.
ಅವರೇಕಾಯಿ 45 ರಿಂದ 65 ರೂ.
ಈರುಳ್ಳಿ 40 ರಿಂದ 50 ರೂ.
ಕೊತ್ತಂಬರಿ ಸೊಪ್ಪು 15 ರಿಂದ 30 ರೂ.
ಪ್ರತಿ ಕಟ್ಟಿನ ಸೊಪ್ಪಿನ ದರ 5 ರಿಂದ 10 ರೂ. ಏರಿಕೆ