ಬೆಂಗಳೂರು: ನಿನ್ನೆ ದಲಿತರ ಮೇಲೆ ಹಲ್ಲೆ, ಇಂದು ರೈತರ ಮೇಲೆ ದೌರ್ಜನ್ಯ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರು ಬಾಕಿ ಕೊಡಿಸುವಂತೆ ಕೇಳಿದ ರೈತರನ್ನು ಬಂಧಿಸಿದ ಸರ್ಕಾರ ತಾನು ಎಲ್ಲಾ ಶ್ರಮಜೀವಿ ವರ್ಗದ ವಿರೋಧಿ ಎಂದು ಸಾಬೀತುಪಡಿಸಿದೆ. ಬಸವರಾಜ ಬೊಮ್ಮಾಯಿ ಅವರೇ, ಜನರ ಧ್ವನಿಯನ್ನು ದಮನಿಸಿ ಆಳುವ ನಿಮ್ಮ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ನಿನ್ನೆ ದಲಿತರ ಮೇಲೆ ಹಲ್ಲೆ, ಇಂದು ರೈತರ ಮೇಲೆ ದೌರ್ಜನ್ಯ.
ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರು ಬಾಕಿ ಕೊಡಿಸುವಂತೆ ಕೇಳಿದ ರೈತರನ್ನು ಬಂಧಿಸಿದ ಸರ್ಕಾರ ತಾನು ಎಲ್ಲಾ ಶ್ರಮಜೀವಿ ವರ್ಗದ ವಿರೋಧಿ ಎಂದು ಸಾಬೀತುಪಡಿಸಿದೆ.@BSBommai ಅವರೇ, ಜನರ ಧ್ವನಿಯನ್ನು ದಮನಿಸಿ ಆಳುವ ನಿಮ್ಮ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ. pic.twitter.com/jcnHdpQdf5
— Karnataka Congress (@INCKarnataka) December 13, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಚುನಾವಣೆ ಹತ್ತಿರವಾದಂತೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಹೈಕಮಾಂಡ್ ಸೇರಿದಂತೆ ಆರೆಸ್ಸೆಸ್ ಬಣ ಯತ್ನಿಸಿದರೆ ಯಡಿಯೂರಪ್ಪ ಪರ ಇನ್ನೊಂದು ಬಣ ತೊಡೆ ತಟ್ಟುತ್ತಿದೆ. ಇಂದಿನ ಚಾಮರಾಜನಗರದ ಕಾರ್ಯಕ್ರಮದಲ್ಲಿ #BSYvsBJP ಕಿತ್ತಾಟ ಬಟಾಬಯಲಾಗಿದೆ ಎಂದಿದೆ.
ಚುನಾವಣೆ ಹತ್ತಿರವಾದಂತೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಹೈಕಮಾಂಡ್ ಸೇರಿದಂತೆ ಆರೆಸ್ಸೆಸ್ ಬಣ ಯತ್ನಿಸಿದರೆ ಯಡಿಯೂರಪ್ಪ ಪರ ಇನ್ನೊಂದು ಬಣ ತೊಡೆ ತಟ್ಟುತ್ತಿದೆ. ಇಂದಿನ ಚಾಮರಾಜನಗರದ ಕಾರ್ಯಕ್ರಮದಲ್ಲಿ #BSYvsBJP ಕಿತ್ತಾಟ ಬಟಾಬಯಲಾಗಿದೆ.#BJPvsBJP pic.twitter.com/IIHUSJhtxR
— Karnataka Congress (@INCKarnataka) December 13, 2022
ಹಾಲಿನ ದರ ಏರಿಸಿದ ಸರ್ಕಾರ ಇತ್ತ ಗ್ರಾಹಕರಿಗೂ, ಅತ್ತ ರೈತರಿಗೂ ಬದುಕನ್ನು ಭಾರವಾಗಿಸಿದೆ. ರೈತರಿಗೆ ಹಾಲಿಗೆ ಸಿಗುವ ದರಕ್ಕಿಂತ ಪಶು ಆಹಾರದ ದರ ಮೂರು ಪಟ್ಟು ಹೆಚ್ಚಾಗಿದೆ, ರೈತರಿಗೆ ಒಂದು ರೂಪಾಯಿ ಕೊಟ್ಟು, ಮೂರು ರೂಪಾಯಿ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸಗೊಳಿಸುತ್ತಿದೆ ಬಿಜೆಪಿ. ಬಸವರಾಜ ಬೊಮ್ಮಾಯಿ ರೈತರನ್ನು ಮೂರ್ಖರೆಂದು ಭಾವಿಸಿದ್ದೀರಾ? ಎಂದು ಪ್ರಶ್ನಿಸಿದೆ.
ಹಾಲಿನ ದರ ಏರಿಸಿದ ಸರ್ಕಾರ ಇತ್ತ ಗ್ರಾಹಕರಿಗೂ, ಅತ್ತ ರೈತರಿಗೂ ಬದುಕನ್ನು ಭಾರವಾಗಿಸಿದೆ.
ರೈತರಿಗೆ ಹಾಲಿಗೆ ಸಿಗುವ ದರಕ್ಕಿಂತ ಪಶು ಆಹಾರದ ದರ ಮೂರು ಪಟ್ಟು ಹೆಚ್ಚಾಗಿದೆ,
ರೈತರಿಗೆ ಒಂದು ರೂಪಾಯಿ ಕೊಟ್ಟು, ಮೂರು ರೂಪಾಯಿ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸಗೊಳಿಸುತ್ತಿದೆ ಬಿಜೆಪಿ.@BSBommai ರೈತರನ್ನು ಮೂರ್ಖರೆಂದು ಭಾವಿಸಿದ್ದೀರಾ? pic.twitter.com/gnpdLu99S7
— Karnataka Congress (@INCKarnataka) December 13, 2022