ನವದೆಹಲಿ: ಮುಂಬರುವಂತ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತ್ಯೇಕವಾಗಿ ಬಸ್ ಯಾತ್ರೆ ನಡೆಸುವ ನಿರ್ಧಾರ ಪ್ರಕಟಿಸಿದ್ದರು. ಆದ್ರೇ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಇಂದು ಬ್ರೇಕ್ ಹಾಕಿತ್ತು. ಈ ಬೆನ್ನಲ್ಲೆ ಒಗ್ಗಟ್ಟಿನ ಮಂತ್ರವನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಕಟಿಸಿದ್ದಾರೆ. ಅಲ್ಲದೇ ಒಟ್ಟಿಗೆ ಬಸ್ ಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಎಐಸಿಸಿ ಸಭೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿದ್ಧರಾಮಯ್ಯ ಅವರು, ನಾವೆಲ್ಲರೂ ಮೊದಲ ಹಂತದಲ್ಲಿ 20 ಡಿಸ್ಸೆದಶಸ್ಸಿ ಒಟ್ಟಿಗೆ ಬಸ್ ಯಾತ್ರೆಯನ್ನು ನಡೆಸಲಾಗುತ್ತದೆ ಎಂದರು.
ಶಿವಮೊಗ್ಗ: ಸೊರಬ ತಾಲೂಕಿನಲ್ಲೇ ದಾಖಲೆ ಬರೆದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ನಡೆದ ‘ರಕ್ತದಾನ ಶಿಬಿರ’
ಮೊದಲ ಹಂತದ ಯಾತ್ರೆ ಬಳಿಕ, ವಿಧಾನಸಭಾ ಕ್ಷೇತ್ರದ ಬಸ್ ಯಾತ್ರೆಯನ್ನು ನಡೆಸಲಾಗುತ್ತದೆ. ಇದರಲ್ಲೂ ಎಲ್ಲರೂ ಒಟ್ಟಾಗಿ ಭಾಗಿಯಾಗುತ್ತೇವೆ. ಒಂದು ತಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ್ರೇ, ಮತ್ತೊಂದು ತಂಡ ನನ್ನ ಅಧ್ಯಕ್ಷತೆಯಲ್ಲಿ ಇರುತ್ತದೆ ಎಂದು ಹೇಳಿದರು.
BIG BREAKING NEWS: ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಮತ್ತೆ ಸಂಘರ್ಷ: ಡಿ.9ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ
ನಾವಿಬ್ಬರೂ ರಾಜ್ಯದ ಮೂಲೆ ಮೂಲೆಗಳಿಗೆ ಬಸ್ ಯಾತ್ರೆ ಕೈಗೊಳ್ಳುತ್ತೇವೆ. ಮೊದಲ ಹಂತದಲ್ಲಿ ದಕ್ಷಿಣ ಭಾಗವನ್ನು ಕವರ್ ಮಾಡಲಾಗುತ್ತದೆ. ಈ ಬಳಿಕ ರಾಜ್ಯದ ಉಳಿದ ಭಾಗಗಳನ್ನು ಕವಲ್ ಮಾಡಿ, ಕೊನೆಗೆ ಸಮಾವೇಶ ಮಾಡಲಾಗುತ್ತದೆ. ನಮ್ಮಿಬ್ಬರ ತಂಡದಲ್ಲಿ ಬೇರೆ ಬೇರೆ ನಾಯಕರು ಇರಲಿದ್ದಾರೆ ಎಂದು ಹೇಳಿದರು.