ಬೆಂಗಳೂರು: ರಾಜ್ಯದಲ್ಲಿ ಮೊಲ ಝೀಕಾ ವೈರಸ್ ( Zika virus )ಸೋಂಕು ದೃಢಪಟ್ಟಿದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಆರೋಗ್ಯಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಯಚೂರು ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿರುವುದಾಗಿ ಹೇಳಿದರು.
ಝೀಕಾ ವೈರಸ್ ದೃಢಪಟ್ಟ ಬಾಲಕಿಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ರಾಯಚೂರು ಹಾಗೂ ನೆರೆಯ ಭಾಗಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಝೀಕಾ ವೈರಸ್ ಸೋಂಕು ದೃಢಪಟ್ಟರೂ ಯಾರೂ ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ತಿಳಿಸಿದರು.
ಪೋಷಕರೇ ಎಚ್ಚರ ; ಮಕ್ಕಳಲ್ಲಿ ಈ ‘ಲಕ್ಷಣ’ಗಳು ಕಾಣಿಸಿಕೊಂಡ್ರೆ, ತಡ ಮಾಡದೇ ತಜ್ಞರ ಸಂಪರ್ಕಿಸಿ.!