ಮಂಗಳೂರು : ಸುಳ್ಯದ ಗಾಂಧಿನಗರ ಲಾಡ್ಜ್ನಲ್ಲಿ ಮಂಗಳೂರು ಮೂಲದ ಯುವಕನೊಬ್ಬ ಬೇರೆ ಯುವತಿಯೊಂದಿಗೆ ಲಾಡ್ಡಿಗೆ ಬಂದು ತಂಗಿದ್ದರು ಈ ವಿಚಾರ ತಿಳಿದ ಪತ್ನಿ ಇದ್ದಕ್ಕಿಂದಂತೆ ಆಗಮಿಸಿ ಬೀದಿಯಲ್ಲೇ ಪತಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ
ಲಾಡ್ಜ್ನ ರಿಸೆಪ್ಯನ್ನಲ್ಲಿ ತನ್ನ ಪತ್ನಿ ಕಾಯುತ್ತಿರುವ ವಿಷಯ ತಿಳಿದು ರೂಮ್ ಬಾಗಿಲು ತೆರೆದೆ ಇದ್ದರು. ಇನ್ನು ಇವರು ಬರುವುದನ್ನು ಕಾಯುತ್ತಿದ್ದ ವಿವಾಹಿತ ಯುವಕನ ಹೆಂಡತಿ ರಸ್ತೆಯಲ್ಲಿ ಪತಿಯನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ವಿಚಾರ ಮಾಡುವ ಮೂಲಕ ರಂಪಾಟ ಮಾಡಿದ್ದಾರೆ.
ಕೂಡಲೇ ಅಲ್ಲಿ ಭಾರೀ ಗಲಾಟೆ ಶಬ್ಧ ಕೇಳಿಸಿದಕ್ಕೆ ಸ್ಥಳೀಯ ಜನರು ಜಮಾಯಿಸಿದರು. ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ. ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ,ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೂವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ