ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಡಗಿನ ಅವಶೇಷಗಳಿಂದ ಸಿಕ್ಕಿ ಜೀನ್ಸ್ ಸಧ್ಯ ಚರ್ಚೆಯಲ್ಲಿದೆ. ಈ ಜೀನ್ಸ್’ಗಾಗಿ ಸಾಕಷ್ಟು ಬಿಡ್ಡಿಂಗ್ ಇದ್ದು, ಸುಮಾರು 94 ಲಕ್ಷಕ್ಕೆ ಮಾರಾಟವಾಗಿದ್ದು, ಇದು ವಿಶ್ವದ ಅತ್ಯಂತ ಹಳೆಯ ಜೀನ್ಸ್ ಎಂದು ಹರಾಜು ಅಧಿಕಾರಿಗಳು ತಿಳಿಸಿದ್ದಾರೆ. ವಾಸ್ತವವಾಗಿ ಹಡಗು 1857ರಲ್ಲಿ ಮುಳುಗಿತು. ಈ ಹಡಗಿನ ಅವಶೇಷಗಳಿಂದ ಅಮೆರಿಕದ ಉತ್ತರ ಕೆರೊಲಿನಾ ರಾಜ್ಯದಲ್ಲಿ ಈ ಜೀನ್ಸ್ ಪತ್ತೆಯಾಗಿದೆ.
5-ಬಟನ್ ಫ್ಲೈನೊಂದಿಗೆ ಈ ಬಿಳಿ ಮೈನರ್ಸ್ ಪ್ಯಾಂಟ್ ಯಾವ ಕಂಪನಿ ತಯಾರಿಸಿದೆ ಅನ್ನೋದ್ರ ಬಗ್ಗೆ ಗೊಂದಲವಿದ್ದು, ಕೆಲವರು ಇದನ್ನ ಲೆವಿ ಸ್ಟ್ರಾಸ್ ಕಂಪನಿಯ ಬಗ್ಗೆ ಹೇಳುತ್ತಿದ್ದಾರೆ. ಆದ್ರೆ, ಅಧಿಕೃತವಾಗಿ ಲೆವಿ ಸ್ಟ್ರಾಸ್ & ಕಂ.ನ ಮೊದಲ ಜೀನ್ಸ್’ನ್ನ 1873ರಲ್ಲಿ ತಯಾರಿಸಲಾಯಿತು. ಆದ್ರೆ, ಈ ಜೀನ್ಸ್ ಅದಕ್ಕಿಂತ 16 ವರ್ಷ ಹಳೆಯದು ಎನ್ನಲಾಗ್ತಿದೆ.
ಐತಿಹಾಸಿಕ ಪುರಾವೆಗಳು ಈ ಜೀನ್ಸ್ ಲೆವಿ ಸ್ಟ್ರಾಸ್ ಜೊತೆಗಿನ ಸಂಬಂಧವನ್ನ ಸೂಚಿಸುತ್ತವೆ ಎಂದು ಕೆಲವರು ನಂಬುತ್ತಾರೆ. ಈ ಕಂಪನಿಯು ಆಗ ಒಣ ವಸ್ತುಗಳ ದೊಡ್ಡ ಸಗಟು ವ್ಯಾಪಾರಿಯಾಗಿತ್ತು. ಇನ್ನು ಈ ಪ್ಯಾಂಟ್ಗಳು ನಂತ್ರ ಬಂದ ಜೀನ್ಸ್’ನ ಆರಂಭಿಕ ಆವೃತ್ತಿಯಾಗಿರಬಹುದು.
ಕಂಪನಿಯ ಇತಿಹಾಸಕಾರ ಮತ್ತು ಆರ್ಕೈವ್ ಡೈರೆಕ್ಟರ್ ಟ್ರೇಸಿ ಪನೆಕ್, “ಈ ಜೀನ್ಸ್ ಯಾರು ತಯಾರಿಸಿದ್ದಾರೆ ಅನ್ನೋದ್ರ ಕುರಿತು ಮಾಡಲಾಗ್ತಿರುವ ಎಲ್ಲಾ ಹಕ್ಕುಗಳನ್ನ ಕೇವಲ ಊಹಾಪೋಹದ ಆಧಾರದ ಮೇಲೆ ಮಾಡಲಾಗುತ್ತಿದೆ” ಎಂದಿದ್ದಾರೆ.
ಈ ಪ್ಯಾಂಟ್ ಯಾರು ತಯಾರಿಸಿದ್ದಾರೆ ಎಂಬ ಗೊಂದಲವಿದೆ, ಆದರೆ ಈ ಜೀನ್ಸ್ 1857ರ ಸೆಪ್ಟೆಂಬರ್ 12ಕ್ಕಿಂತ ಮೊದಲು ತಯಾರಿಸಲ್ಪಟ್ಟಿದೆ ಎಂಬುದು ಖಚಿತ. ಯಾಕಂದ್ರೆ, ಈ ಜೀನ್ಸ್ 1857ರ ಸೆಪ್ಟೆಂಬರ್ 12ರಂದು ಚಂಡಮಾರುತದಲ್ಲಿ ಮುಳುಗಿದ ಹಡಗಿನಲ್ಲಿ ಪತ್ತೆಯಾಗಿದೆ. ಈ ಹಡಗು ಸ್ಯಾನ್ ಫ್ರಾನ್ಸಿಸ್ಕೋದಿಂದ ಪನಾಮ ಮೂಲಕ ನ್ಯೂಯಾರ್ಕ್ಗೆ ಹೋಗುತ್ತಿತ್ತು. ಇನ್ನು ಇದಕ್ಕಿಂತ ಹಳೆಯ ಜೀನ್ಸ್ ಅಸ್ತಿತ್ವದಲ್ಲಿದೆ ಅನ್ನೋದ್ರ ಬಗ್ಗೆ ಯಾವುದೇ ಪುರಾವೆಗಳಿಲ್ಲ.
ಈ ಜೀನ್ಸ್ನ ಹರಾಜುದಾರ ಮತ್ತು ಕ್ಯಾಲಿಫೋರ್ನಿಯಾ ಗೋಲ್ಡ್ ಮಾರ್ಕೆಟಿಂಗ್ ಗ್ರೂಪ್ನ ವ್ಯವಸ್ಥಾಪಕ ಪಾಲುದಾರ ಡ್ವೈಟ್ ಮ್ಯಾನ್ಲಿ, ಈ ಮೈನರ್ಸ್ ಜೀನ್ಸ್ ಚಂದ್ರನ ಮೇಲಿನ ಮೊದಲ ಧ್ವಜದಂತಿದೆ. ಇದೊಂದು ಐತಿಹಾಸಿಕ ಕ್ಷಣ ಎಂದಿದ್ದಾರೆ.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ವೇತನ ಕುರಿತು ಕಾಲೇಜುಗಳಿಗೆ ಮಹತ್ವದ ಮಾಹಿತಿ |Scholarship
BIGG NEWS : GPay, PhonePay ದಿನಕ್ಕೆ ಎಷ್ಟು ಬಾರಿ ಬಳಸಬಹುದು? ಎಷ್ಟು ಹಣ ಕಳುಹಿಸಬಹುದು ಗೊತ್ತೆ? ಇಲ್ಲಿದೆ ಓದಿ