ನವದೆಹಲಿ: ಹೆರಿಗೆ ರಜೆಯಲ್ಲಿದ್ದ ದೆಹಲಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪತಿಯಿಂದ ತಿಂಗಳುಗಳಿಂದ ಕಿರುಕುಳ ಅನುಭವಿಸುತ್ತಿರುವ ಘಟನೆ ನಡೆದಿದೆ. ಸ್ವತಃ ಪೊಲೀಸ್ ಅಧಿಕಾರಿಯಾಗಿದ್ದರೂ, ಈ ನಿಟ್ಟಿನಲ್ಲಿ ಡಿಸಿಡಬ್ಲ್ಯು ಸ್ವಾತಿ ಮಲಿವಾಲ್ ಅವರ ಸಹಾಯ ಪಡೆಯಲು ಅವರು ಟ್ವಿಟ್ಟರ್ ಮೊರೆ ಹೋಗಿದ್ದಾರೆ.
ಡಿಸೆಂಬರ್ 12 ರಂದು, ಡೋಲಿ ತೆವಾಥಿಯಾ ಎಂದು ಗುರುತಿಸಲಾದ ಮಹಿಳಾ ಪೊಲೀಸ್ ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ತಮ್ಮನ್ನು ಗಂಡ ಥಳಿಸಿದ ಸಿಸಿಟಿವಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಕೀಲರಾಗಿರುವ ಡೋಲಿ ಅವರ ಪತಿ ತನ್ನ ಪತ್ನಿಯನ್ನು ನಿಂದಿಸುವಾಗ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಪ್ರಕರಣದ ಬಗ್ಗೆ ಡಿಸಿಡಬ್ಲ್ಯೂ ಅಧಿಕಾರಿಗಳ ಸಹಾಯವನ್ನು ಕೋರಿದ್ದಾರೆ.
ಟ್ವಿಟ್ನಲ್ಲಿ ಅವರು “ನಾನು ದೆಹಲಿ ಪೊಲೀಸ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದೇನೆ. ಪ್ರಸ್ತುತ ಹೆರಿಗೆ ರಜೆಯಲ್ಲಿದ್ದಾರೆ. ನನ್ನ ಪತಿ ವಕೀಲ ತರುಣ್ ದಾಬಾಸ್ ಅವರಿಂದ ನಾನು ನಿರಂತರವಾಗಿ ನಿಂದನೆಯನ್ನು ಎದುರಿಸುತ್ತಿದ್ದೇನೆ. ಇಂದು ಅವರು ಹಾಡಹಗಲೇ ನನ್ನನ್ನು ಹೊಡೆದಿದ್ದಾರೆ. ದಯವಿಟ್ಟು ಕ್ರಮವನ್ನು ಕೈಗೊಳ್ಳಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಲಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿ, “… ಸ್ವತಃ ಪೊಲೀಸರು ಟ್ವಿಟ್ಟರ್ ನಲ್ಲಿ ಸಹಾಯ ಪಡೆಯಲು ಒತ್ತಾಯಿಸಲ್ಪಡುತ್ತಾರೆ! ನಾನು ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿದ್ದೇನೆ, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಸುರಕ್ಷಿತವಾಗಿಲ್ಲದಿದ್ದರೆ ಸಾಮಾನ್ಯ ಮಹಿಳೆಯರು ಹೇಗೆ ಸುರಕ್ಷಿತರಾಗಿರುತ್ತಾರೆ? ಅಂಥ ಪ್ರಶ್ನೆ ಮಾಡಿದ್ದಾರೆ.
I am Sub-Inspector in Delhi Police presently on maternity leave. Today my husband Advocate Mr. Tarun Dabas r/o village- Barwala, Sector-36, Rohini, Delhi came at my home and brutally beat me @PMOIndia @HMOIndia @CPDelhi @DCWDelhi @NCWIndia @indiatvnews @TimesNow @barconcilindia pic.twitter.com/hXbwvuZMHD
— Doli Tevathia (@TevathiaDoli) December 11, 2022