ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಆಸ್ತಿಗಾಗಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ನಡೆದಿದೆ.
BIGG NEWS: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೀದರ್ ನಲ್ಲಿ ಜನರಿಗೆ ಹೆಚ್ಚಾದ ಅನಾರೋಗ್ಯದ ಸಮಸ್ಯೆ
ನಾಗೇಂದ್ರಪ್ಪ ಕೊಲೆಯಾದ ವ್ಯಕ್ತಿ. ನಾಗೇಂದ್ರಪ್ಪ ಶಿರಾಳಕೊಪ್ಪದ ಬೋವಿ ಗ್ರಾಮದ ನಿವಾಸಿ ಆಗಿದ್ದ. ಈತನ ಶವ ಶಿರಾಳಕೊಪ್ಪದಲ್ಲಿ ನ. 29 ರಂದು ಚರಂಡಿಯಲ್ಲಿ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಕೆಲವು ರಹಸ್ಯಗಳು ಬಯಲಾಗಿದೆ.ನಾಗೇಂದ್ರಪ್ಪಗೆ ಐದೂವರೆ ಎಕರೆ ಭೂಮಿಯಲ್ಲಿ ಐದು ಎಕರೆ ತೋಟವಿದೆ. ಉತ್ತಮ ಫಸಲು ಬರುತ್ತಿದ್ದರಿಂದ ಆದಾಯವೂ ಹೆಚ್ಚಿತ್ತು. ಅಷ್ಟೇ ಅಲ್ಲದೇ ನಾಗೇಂದ್ರಪ್ಪನ ಮೊದಲ ಪತ್ನಿಗೆ ಐವರು ಮಕ್ಕಳಿದ್ದರು.
BIGG NEWS: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೀದರ್ ನಲ್ಲಿ ಜನರಿಗೆ ಹೆಚ್ಚಾದ ಅನಾರೋಗ್ಯದ ಸಮಸ್ಯೆ
ಮೊದಲ ಪತ್ನಿ ನಿಧನದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ವಿಧವೆಯನ್ನು ನಾಗೇಂದ್ರಪ್ಪ ಮದುವೆಯಾಗಿದ್ದ. ಈ ಮದುವೆಯನ್ನು ಮಕ್ಕಳೇ ನಿಂತು ಮಾಡಿಸಿದ್ದರು.ಆದರೆ ನಾಗೇಂದ್ರಪ್ಪನ ಮೊದಲ ಪತ್ನಿಯ ಮಕ್ಕಳು ಆಸ್ತಿ ಪಾಲು ಮಾಡುವಂತೆ ಹಿಂದಿನಿಂದಲೂ ಒತ್ತಾಯವಿತ್ತು. ಆದರೆ ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದ. ಈ ಮಧ್ಯೆ ಎರಡನೇ ಪತ್ನಿಗೂ ಗಂಡು ಮಗು ಜನಿಸಿತ್ತು. ಇದರಿಂದಾಗಿ ನಾಗೇಂದ್ರಪ್ಪನ ಮೊದಲ ಪತ್ನಿಯ ಮಕ್ಕಳಾದ ಮಂಜುನಾಥ್, ಉಮೇಶ್ ಸಿಟ್ಟಾಗಿದ್ದರು.