ಬೆಳಗಾವಿ : ತಹಸೀಲ್ದಾರ್ ಮನೆಗೆ ಕನ್ನ ಹಾಕಿದ ಖದೀಮರು ಚಿನ್ನಾಭರಣ ಹಾಗೂ ಬೆಳ್ಳಿ, ಹಣ ಎಗರಿಸಿರುವ ಘಟನೆ ಇಲ್ಲಿನ ಗೋಕಾಕ ನಗರದಲ್ಲಿ ನಡೆದಿದೆ.
ಗೋಕಾಕ ನಗರದ ಲೋಕೋಪಯೋಗಿ ಇಲಾಖೆಯ ವಸತಿ ಪ್ರದೇಶದಲ್ಲಿರುವ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೊಳ ಮನೆಗೆ ಕನ್ನ ಹಾಕಿದ ಖದೀಮರು 40 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ. 5 ಸಾವಿರ ಹಣ ಕದ್ದು ಎಸ್ಕೇಪ್ ಆಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಗೋಕಾಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಕಾಟಕ್ಕೆ ನಗರದ ಜನತೆ ಬೇಸತ್ತು ಹೋಗಿದ್ದಾರೆ.
BREAKING NEWS : ಗೋವಾದಲ್ಲಿ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ | Goa Airport
ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಡಿ.18 ರಂದು ಧಾರವಾಡದಲ್ಲಿ ಉದ್ಯೋಗ ಮೇಳ ಆಯೋಜನೆ |Job Fair