ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ, ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ. ಸೈಕ್ಲೋನ್ ಕಾರಣದಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ರೈತರು ಧರಣಿ ನಡೆಸುತ್ತಿದ್ದಂತ ಪೆಂಡಾಲ್ ಕುಸಿತಗೊಂಡಿದೆ. ಇದಕ್ಕೂ ಲೆಕ್ಕಿಸದೇ ರೈತರು ಮಾತ್ರ ತಮ್ಮ ಸತ್ಯಾಗ್ರಹ, ಧರಣಿಯನ್ನು ಮುಂದುವರೆಸಿದ್ದಾರೆ.
ಕಬ್ಬಿಗೆ ನ್ಯಾಯಯುತ ದರ ನಿಗದಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ರೈತರು ನಡೆಸುತ್ತಿರುವಂತ ಸತ್ಯಾಗ್ರಹವು 20ನೇ ದಿನಕ್ಕೆ ಕಾಲಿಟ್ಟಿದೆ. ಕಬ್ಬು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಕುರುಬರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಇಂದಿನ ಹೋರಾಟದಲ್ಲಿ ವಿವಿಧ ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು.
ಈ ನಡುವೆ, ಮಳೆಯ ಹೊಡೆತಕ್ಕೆ ಸಿಲುಕಿ ಸತ್ಯಾಗ್ರಹ ಸ್ಥಳದಲ್ಲಿನ ಪೆಂಡಾಲ್ ಕುಸಿದು ಬಿದದ್ದಿದೆ. ಆದರೂ ಛಲ ಬಿಡದೆ ಕಬ್ಬು ಬೆಳೆಗಾರರು ಮಳೆಯಲ್ಲೇ ಹೋರಾಟ ಮುಂದುವರಿಸಿದ್ದಾರೆ.
ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನಾಳೆ ಬಳ್ಳಾರಿಯಲ್ಲಿ ಉದ್ಯೋಗ ಮೇಳ ಆಯೋಜನೆ |JOB FAIR
ಈ ವೇಳೆ ಮಾತನಾಡಿದಂತ ಕುರುಬೂರು ಶಾಂತಕುಮಾರ್, ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳ ಶಾಹಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದರು.
ಸುಳ್ಳು ಭರವಸೆಗಳನ್ನು ನೀಡುತ್ತಲೇ ಕಾಲ ಕಳೆದು ರೈತರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡಬೇಡಿ, ಡಬಲ್ ಇಂಜಿನ ಸರ್ಕಾರ ಡಬಲ್ ಗೇಮ್ ಆಡಬಾರದು. ಪ್ರಕೃತಿ ಮುನಿಸು ಈ ವರ್ಷ ಅತಿವೃಷ್ಟಿ ಮಳೆ ಹಾನಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಗ್ರಾಹಕರು ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗಲಾದರೂ ರೈತರ ಶಕ್ತಿ ತಿಳಿಯುತ್ತದೆ ಎಂದರು.
ಸಚಿವ ಶ್ರೀರಾಮುಲು ಭ್ರಷ್ಟಾಚಾರದಲ್ಲೂ ‘PHD’ ಮಾಡಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಕಬ್ಬು ಬೆಳೆಗಾರರ ಆಹೋ ರಾತ್ರಿ ಧರಣಿಯ 20ನೆ ದಿನದ ಹೋರಾಟದಲ್ಲಿ, ಉತ್ತರಕನ್ನಡ ಜಿಲ್ಲೆಯ ರೈತ ಮುಖಂಡರಾದ ಕುಮಾರ ಬೂಬಾಟಿ, ರಾಜ್ಯ ರೈತಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಪಿ ಸೂಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ, ಗುರುಸಿದ್ದಪ್ಪಕೂಟಗಿ ಮೊದಲಾದವರು ಭಾಗಿಯಾಗಿದ್ದರು.