ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆಯಿಂದ ( South Western Railway ) ರೈಲಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದಂತ ಚಿನ್ನಾಭರಣಗಳನ್ನು ಮರಳಿ ತಲುಪಿಸುವ ಮೂಲಕ, ಪ್ರಮಾಣಿಕತೆಯನ್ನು ರೈಲ್ವೆ ಸಿಬ್ಬಂದಿ ಮೆರೆದಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿತ್ತು, ಡಿಸೆಂಬರ್ 11, 2022 ರ ಮುಂಜಾನೆ, ಕೆ ಎಸ್ ಆರ್ ಬೆಂಗಳೂರು ನಿಲ್ದಾಣದ ಪ್ಲಾಟ್ಫಾರ್ಮ್ ನಂ.10 ರಲ್ಲಿ ಶ್ರೀಮತಿ ಸಂಗೀತಾ ಎಂಬ ಮಹಿಳೆಯೊಬ್ಬರು ಇಳಿದರು. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ನಲ್ಲಿ ಬಂದಿದ್ದರು. ಕುಟುಂಬವು ಬಂಗಾರಪೇಟೆಗೆ ಸಂಪರ್ಕ ರೈಲನ್ನು ತೆಗೆದುಕೊಳ್ಳಲು ಯೋಜಿಸಿತ್ತು ಮತ್ತು ನಿಲ್ದಾಣದ ಪ್ಲಾಟ್ಫಾರ್ಮ್ 10 ರಲ್ಲಿ ಸುಮಾರು 2 ಗಂಟೆಗಳ ಕಾಲ ಕಾದು ನಂತರ ಮುಂದಿನ ರೈಲನ್ನು ಹಿಡಿಯಲು ಅವರು ಪ್ಲಾಟ್ಫಾರ್ಮ್ 6 ತಲುಪಿದರು ಎಂದಿದೆ.
ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನಾಳೆ ಬಳ್ಳಾರಿಯಲ್ಲಿ ಉದ್ಯೋಗ ಮೇಳ ಆಯೋಜನೆ |JOB FAIR
ಈ ವೇಳೆ ತಮ್ಮ ಚೀಲದಿಂದ ಸುಮಾರು 100 ಗ್ರಾಂ ಚಿನ್ನಾಭರಣ (ಅಂದಾಜು ರೂ. 4,80,000/-) ಇದ್ದ ಪೆಟ್ಟಿಗೆ ಕಾಣೆಯಾಗಿದ್ದುದನ್ನು ಗಮನಿಸಿ, ಕೂಡಲೇ ಅವರು ರೈಲ್ವೆ ಪೋಲಿಸರನ್ನು ಸಂಪರ್ಕಿಸಿದರು. ಏತನ್ಮಧ್ಯೆ, ರೈಲ್ ಸಹಾಯಕ್ (ಪರವಾನಗಿ ಪಡೆದ ಪೋರ್ಟರ್- ಬ್ಯಾಡ್ಜ್ ಸಂಖ್ಯೆ 186) ಮೊಹಮ್ಮದ್ ಐಜಾಜ್ ಅವರು ಪ್ಲಾಟ್ಫಾರ್ಮ್ 10 ರಲ್ಲಿ ಪೆಟ್ಟಿಗೆಯನ್ನು ಕಂಡು ಅದನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲು ಕರ್ತವ್ಯದಲ್ಲಿದ್ದ ನಿಲ್ದಾಣದ ಉಪ ವ್ಯವಸ್ಥಾಪಕ (ವಾಣಿಜ್ಯ) ಶ್ರೀ ಶ್ರೀಧರ್ ಅವರಿಗೆ ನೀಡಿದರು. ಉಪ ವ್ಯವಸ್ಥಾಪಕರು ರೈಲ್ವೇ ರಕ್ಷಣಾ ಪಡೆಗೆ ಮಾಹಿತಿ ನೀಡಿ, ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ರೈಲ್ವೆ ಪೊಲೀಸರ ಸಮ್ಮುಖದಲ್ಲಿ ವಸ್ತುಗಳನ್ನು ಗುರುತಿಸಿ ನಿಜವಾದ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಸಚಿವ ಶ್ರೀರಾಮುಲು ಭ್ರಷ್ಟಾಚಾರದಲ್ಲೂ ‘PHD’ ಮಾಡಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಪ್ಲಾಟ್ಫಾರ್ಮ್ ನಂ.10 ರಲ್ಲಿ ತಮ್ಮ ಚೀಲದಿಂದ ಪೆಟ್ಟಿಗೆ ಬಿದ್ದಿರುವುದು ತನಗೆ ತಿಳಿದಿರಲಿಲ್ಲ ಎಂದು ತಿಳಿಸಿದ ಸಂಗೀತಾ ಎಲ್ಲಾ ಎಲ್ಲಾ ವಸ್ತುಗಳು ಸರಿಯಾಗಿರುವುದಾಗಿ ಖಚಿತ ಪಡಿಸಿ ಹಿಂಪಡೆದರು. ಇಡೀ ರೈಲ್ವೇ ತಂಡದ ಪ್ರಾಮಾಣಿಕತೆಯನ್ನು, ವಿಶೇಷವಾಗಿ ರೈಲ್ವೇ ಸಹಾಯಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಪ್ರಯಾಣಿಕರು ರೈಲ್ವೇ ಮತ್ತು ರೈಲ್ ಸಹಾಯಕರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಕುಸುಮಾ ಹರಿಪ್ರಸಾದ್ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ರೈಲ್ ಸಹಾಯಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿ ಅವರಿಗೆ ಸೂಕ್ತ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.