ಮಥುರಾ : ಉತ್ತರ ಪ್ರದೇಶದ ಮಥುರಾದಲ್ಲಿ ಮೊಬೈಲ್ ಸ್ಫೋಟಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣವು ಮಥುರಾ ಪೊಲೀಸ್ ಠಾಣೆಯ ಕೊಟ್ವಾಲಿಯ ಮೇವಾಟಿ ಪ್ರದೇಶಕ್ಕೆ ಸಂಬಂಧಿಸಿದೆ. ಮೊಬೈಲ್ ಸ್ಫೋಟದಿಂದ ಹದಿಮೂರು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಈ ವಿಷಯ ತಿಳಿದ ತಕ್ಷಣ ಸಂಬಂಧಿಕರು ಗೊಂದಲಕ್ಕೆ ಒಳಗಾಗಿದ್ದು, ಸ್ಥಳೀಯರ ಗುಂಪು ಮನೆಯಲ್ಲಿ ಜಮಾಯಿಸಿದೆ.
ತಕ್ಷಣ ಬಾಲಕ ಆಸ್ಪತ್ರೆಗೆ ದಾಖಲು
ಮೊಬೈಲ್ ಸ್ಪೋಟಗೊಂಡು ಮಗು ಒದ್ದಾಡಿದ್ದೇ ತಡ ಕುಟುಂಬಸ್ಥರು ಮಗುವನ್ನ ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಬಾಲಕನ ತಂದೆ ಮೊಹಮ್ಮದ್ ಜಾವೇದ್, ” ಕೊಠಡಿಯಲ್ಲಿ ಕುಳಿತು ನನ್ನ ಮಗ ಮೊಬೈಲ್’ನಲ್ಲಿ ಆಟವಾಡುವಾಗ ಏಕಾಏಕಿ ದೊಡ್ಡ ಸ್ಫೋಟದ ಸದ್ದು ಕೇಳಿದ್ದು, ಹೋಗಿ ನೋಡಿದಾಗ ಗಾಯಾಳುವಾಗಿ ಬೆಡ್ ಮೇಲೆ ಬಾಲಕ ಮಲಗಿ ಒದ್ದಾಡುತ್ತಿದ್ದ” ಎಂದಿದ್ದಾರೆ.
ಈ ಘಟನೆಯಿಂದ ಕುಟುಂಬಸ್ಥರೆಲ್ಲಾ ಬೆಚ್ಚಿಬಿದ್ದಿದ್ದಾರೆ. ಕೋಣೆಯೊಳಗೆ ಹೋಗಿ ನೋಡಿದಾಗ ಅಮಾಯಕ ಹಿಡಿದಿರುವ ಮೊಬೈಲ್ ಸುಟ್ಟು ಹೋಗಿರುವುದು ಕಂಡು ಬಂತು. ಇದಾದ ಬಳಿಕ ಮನೆಯವರು ಆ ಬಾಲಕನನ್ನ ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿನ ಚಿಕಿತ್ಸೆ ನಡೆಯುತ್ತಿದ್ದು, ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ.
ಮೊಬೈಲ್ ಎಂಐ ಕಂಪನಿಗೆ ಸೇರಿದ್ದು, ದಿನನಿತ್ಯದಂತೆ ಮಗು ಮೊಬೈಲ್ನಲ್ಲಿ ಆಟವಾಡುತ್ತಿತ್ತು. ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದೆ. ಮೊಬೈಲ್ ಸ್ಫೋಟಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಗಾಯಾಳು ಮಗುವಿನ ತಂದೆ ಮಾಹಿತಿ ನೀಡಿದ್ದಾರೆ.
HEALTH TIPS: ಹೆಚ್ಚಾಗಿ ನೀವು ಪ್ರೊಟೀನ್ ಪೌಡರ್ ಸೇವಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ
Rain in Bangalore: ಚಳಿಯಿಂದ ತತ್ತರಿಸಿರುವ ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಇನ್ನೂ ಮೂರು ದಿನ ಮಳೆ