ಬೆಂಗಳೂರು: ಬಿಜೆಪಿಯಲ್ಲಿ ( BJP ) ರೌಡಿ ಮೋರ್ಚಾಗೆ ಮನ್ನಣೆ ಸಿಗುತ್ತಿರುವಾಗ ಬಿಜೆಪಿಗರು ಒಬ್ಬೊಬ್ಬರಾಗಿಯೇ ನಾನೂ ರೌಡಿಯಾಗಿದ್ದೆ, ನಾನೂ ಗೂಂಡಾಗಿರಿ ಮಾಡಿದ್ದೆ ಎಂದು ತಮ್ಮ ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ. ಬಿ.ಶ್ರೀರಾಮುಲು ( Minister B Sriramulu ) ಅವರು ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್ಡಿ ಮಾಡಿದ್ದರು ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್ಡಿ ಮಾಡಿದ್ದಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ವಾಗ್ಧಾಳಿ ನಡೆಸಿದೆ.
ಬಿಜೆಪಿಯಲ್ಲಿ ರೌಡಿ ಮೋರ್ಚಾಗೆ ಮನ್ನಣೆ ಸಿಗುತ್ತಿರುವಾಗ ಬಿಜೆಪಿಗರು ಒಬ್ಬೊಬ್ಬರಾಗಿಯೇ ನಾನೂ ರೌಡಿಯಾಗಿದ್ದೆ, ನಾನೂ ಗೂಂಡಾಗಿರಿ ಮಾಡಿದ್ದೆ ಎಂದು ತಮ್ಮ ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ!@sriramulubjp ಅವರು ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್ಡಿ ಮಾಡಿದ್ದರು ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್ಡಿ ಮಾಡಿದ್ದಾರೆ! pic.twitter.com/BP75mprAvO
— Karnataka Congress (@INCKarnataka) December 11, 2022
ಈ ಕುರಿತು ಟ್ವಿಟ್ ಮಾಡಿದ್ದು, ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ನಳೀನ್ ಕುಮಾರ್ ಕಟೀಲ್ ಹಾಗೂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದವರು ಬೆತ್ತನಗೆರೆ ಶಂಕರನನ್ನು ಸೇರಿಸಿಕೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈಗ ನೀವು ಹೇಳಿದ್ದು ಸುಳ್ಳು ಎಂಬುದನ್ನು ಒಪ್ಪುತ್ತೀರಾ? ತಪ್ಪಾಗಿದೆ ಎಂದಾದರೆ ಏಕೆ ಇನ್ನೂ ಪಕ್ಷದಿಂದ ಹೊರಹಾಕಿಲ್ಲ? ಎಂದು ಪ್ರಶ್ನಿಸಿದೆ.
ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಸೇರಿಸಿಕೊಳ್ಳುವುದಿಲ್ಲ ಎಂದಿದ್ದ @nalinkateel ಹಾಗೂ @BSBommai ಅವರೇ, ನಿಮ್ಮದೇ ಪಕ್ಷದವರು ಬೆತ್ತನಗೆರೆ ಶಂಕರನನ್ನು ಸೇರಿಸಿಕೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ಈಗ ನೀವು ಹೇಳಿದ್ದು ಸುಳ್ಳು ಎಂಬುದನ್ನು ಒಪ್ಪುತ್ತೀರಾ? ತಪ್ಪಾಗಿದೆ ಎಂದಾದರೆ ಏಕೆ ಇನ್ನೂ ಪಕ್ಷದಿಂದ ಹೊರಹಾಕಿಲ್ಲ? pic.twitter.com/aYbbdroe4f
— Karnataka Congress (@INCKarnataka) December 11, 2022
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವುದರಲ್ಲಿ ರೈತರಿಗೆ ದ್ರೋಹವೆಸಗಿದೆ ಸರ್ಕಾರ. ರೈತರ ಸಮಸ್ಯೆ ಅರಿಯಲು ಹೈಕೋರ್ಟಿನಿಂದ ಹೇಳಿಸಿಕೊಳ್ಳುವಷ್ಟು ದಪ್ಪ ಚರ್ಮವಿದೆಯೇ ಬಿಜೆಪಿ ಸರ್ಕಾರಕ್ಕೆ? ಮೊಬೈಲ್ ಆಪ್ನಲ್ಲಿ ಬೆಳೆ ಮಾಹಿತಿ ಅಪ್ಲೋಡ್ ಮಾಡುವ ನಿಯಮ ರೂಪಿಸಿದ ಸರ್ಕಾರಕ್ಕೆ ರೈತರ ಪರಿಸ್ಥಿತಿಯ ಅರಿವಿಲ್ಲದಿರುವುದು ದುರಂತ ಎಂದಿದೆ.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವುದರಲ್ಲಿ ರೈತರಿಗೆ ದ್ರೋಹವೆಸಗಿದೆ ಸರ್ಕಾರ.
ರೈತರ ಸಮಸ್ಯೆ ಅರಿಯಲು ಹೈಕೋರ್ಟಿನಿಂದ ಹೇಳಿಸಿಕೊಳ್ಳುವಷ್ಟು ದಪ್ಪ ಚರ್ಮವಿದೆಯೇ @BJP4Karnataka ಸರ್ಕಾರಕ್ಕೆ?
ಮೊಬೈಲ್ ಆಪ್ನಲ್ಲಿ ಬೆಳೆ ಮಾಹಿತಿ ಅಪ್ಲೋಡ್ ಮಾಡುವ ನಿಯಮ ರೂಪಿಸಿದ ಸರ್ಕಾರಕ್ಕೆ ರೈತರ ಪರಿಸ್ಥಿತಿಯ ಅರಿವಿಲ್ಲದಿರುವುದು ದುರಂತ. pic.twitter.com/JOQAl2UGaO
— Karnataka Congress (@INCKarnataka) December 11, 2022
ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ? ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿರುದ್ಧ ವಾಗ್ಧಾಳಿ ನಡೆಸಿದೆ.
ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ? pic.twitter.com/yvyZRHAUk1
— Karnataka Congress (@INCKarnataka) December 11, 2022