ಲಕ್ನೋ: ಲಕ್ನೋದ ಜಾನಕಿಪುರಂ ಎಕ್ಸ್ಟೆನ್ಷನ್ ಪ್ರದೇಶದಲ್ಲಿ ನಾಯಿಗಳ ಗುಂಪೊಂದು ಕಚ್ಚಿದ ಪರಿಣಾಮ 40 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಶ್ರೀಸ್ತಿ ಅಪಾರ್ಟ್ಮೆಂಟ್ ನಿವಾಸಿ ರಿಹಾನ್ನಾ ಆಸಿಫ್ ರಾತ್ರಿ 9 ಗಂಟೆಗೆ ತನ್ನ ಮಾವನೊಂದಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ಅವರು ದಣಿದು ಆವರಣದ ಬೆಂಚಿನ ಮೇಲೆ ಕುಳಿತಿದ್ದರು. ಈ ವೇಳೇ ಆರು ನಾಯಿಗಳ ಗುಂಪು ನನ್ನ ಮೇಲೆ ಬೊಗಳಲು ಪ್ರಾರಂಭಿಸಿತ್ತು, ಭಯಭೀತಳಾದ ನಾನು ನಾಯಿಗಳನ್ನು ಓಡಿಸಲು ಪ್ರಯತ್ನಿಸಿದೆ, ಆದರೆ ಅವುಗಳಲ್ಲಿ ಒಂದು ನನ್ನ ಮೇಲೆ ದಾಳಿದ ಬಳಿಕ ಇಡೀ ನಾಯಿಗಳು ನನ್ನ ಮೇಲೆ ದಾಳಿ ಮಾಡಿತು” ಎಂದು ರಿಹಾನ್ನಾ ಹೇಳಿದ್ದಾರೆ.
“ನಾಯಿಯೊಂದು ನನ್ನ ಕಾಲ್ಬೆರಳುಗಳ ಮೇಲೆ ಕಚ್ಚಿ ಮಾಂಸದ ತುಂಡನ್ನು ಹೊರತೆಗೆಯಲು ಪ್ರಯತ್ನಿಸಿತು. ಇದಲ್ಲದೇ ಬೇರೆ ನಾಯಿಗಳು ನನ್ನ ತೊಡೆ ಮತ್ತು ಸೊಂಟವನ್ನು ಕಚ್ಚಲು ಪ್ರಯತ್ನಿಸಿತು ಅಂಥ ಇದೇ ವೇಳೆ ಅವರು ಹೇಳಿದ್ದಾರೆ. ರಿಹಾನ್ನಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನಾಯಿಗಳ ಕೂಗು ಇನ್ನೂ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ನನ್ನ ನೆರೆಹೊರೆಯವರು ಮತ್ತು ನನ್ನ ಮಾವ ನನ್ನ ರಕ್ಷಣೆಗೆ ಬರದಿದ್ದರೆ, ನಾನು ದಾಳಿಯಲ್ಲಿ ಸಾಯುತ್ತಿದ್ದೆ ಅಂತ ಹೇಳಿದ್ದಾರೆ.