ರಾಮನಗರ: ಈಗಾಗಲೇ ಅನೇಕ ಬಾರಿ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವೀರೇಗೌಡನ ದೊಡ್ಡಿಯ ಗ್ರಾಮಕ್ಕೆ ಲಗ್ಗೆ ಇಟ್ಟು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದು. ಈಗ ಕಾಡಿನ ಅಂಚಿನಲ್ಲಿಯೇ ಕೋಳಿ ಫಾರಂ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದಾಗಿ ಹುಲಿ, ಚಿರತೆಗಳ ದಾಳಿಯ ಭೀತಿ ಶುರುವಾಗಿದೆ.
ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಸಿಂಗಸಂದ್ರದ ಬಳಿಯ ವೀರೇಗೌಡನ ದೊಡ್ಡಿ ಗ್ರಾಮ, ಕಾಡಂಚಿನ ಗ್ರಾಮವಾಗಿದೆ. ಈ ಗ್ರಾಮಕ್ಕೆ ಹಲವು ಭಾರೀ ಆನೆಗಳ ಹಿಂಡು ಲಗ್ಗೆ ಇಟ್ಟು, ಜನರು ಬೆಳೆದಂತ ಫಸಲನ್ನು ಹಾಳು ಮಾಡಿ, ಭಯ ಹುಟ್ಟಿಸಿದ್ದವು. ಇದೀಗ ಈ ಗ್ರಾಮದಲ್ಲಿ ಕೋಳಿ ಫಾರಂ ಒಂದನ್ನು ಅಕ್ರಮವಾಗಿ ಗ್ರಾಮ ಬಳಿಯಲ್ಲಿಯೇ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹಸಿರು ನ್ಯಾಯಾಧೀಕರಣದ ಆದೇಶದಂತೆ ಕೋಳಿ ಫಾರಂ ನಿರ್ಮಾಣ ಮಾಡಬೇಕಾದರೇ, ಜನವಸತಿ ಪ್ರದೇಶದಿಂದ 5000 ಮೀಟರ್ ದೂರ ಇರಬೇಕೆಂಬ ನಿಯಮವಿದೆ. ಆದ್ರೇ ಈ ನಿಯಮವನ್ನು ಗಾಳಿಗೆ ತೂರಿದಂತೆ ವೀರೇಗೌಡನದೊಡ್ಡಿ ಗ್ರಾಮಕ್ಕೆ 1000 ಮೀಟರ್ ದೂರದಲ್ಲಿ, ನೀರಿನ ಮೂಲ ಇರುವಲ್ಲಿಯೇ ಕೋಳಿಫಾರಂ ಶೆಡ್ ನಿರ್ಮಾಣ ಮಾಡುತ್ತಿರೋದ್ದಾರೆ ಎನ್ನಲಾಗಿದೆ.
ಹೀಗೆ ಗ್ರಾಮದ ಕೂಗಳತೆಯ ದೂರದಲ್ಲೇ ಕೋಳಿಫಾರಂ ಶೆಡ್ ನಿರ್ಮಾಣ ಮಾಡುತ್ತಿರುವದರಿಂದ ಗ್ರಾಮದ ಜನರು ವಾಸನೆಯಲ್ಲಿ ಬದುಕೋದು ಕಷ್ಟ ಎಂಬುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ನೀರಿನ ಹಳ್ಳ ಹಾಗೂ ಅರ್ಕಾವತಿ ನಾಲೆಯ ಬಳಿಯಲ್ಲಿಯೇ ಕೋಳಿಫಾರಂ ನಿರ್ಮಾಣ ಮಾಡುತ್ತಿರುವುದರಿಂದ ಅದರ ಗಲೀಜು ಕೂಡ ನೀರಿಗೆ ಸೇರಿ ಜನರ ಆರೋಗ್ಯದ ಮೇಲ ದುಷ್ಪರಿಣಾಮ ಬೀರವುಂತ ಆತಂಕವನ್ನು ಹುಟ್ಟು ಹಾಕಿದೆ.
ಇದಷ್ಟೇ ಅಲ್ಲದೇ ವೀರೇಗೌಡನ ದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ವ್ಯಾಪ್ತಿ ಅಂಚಿನಲ್ಲಿದ್ದು, ಈ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ವಾಸಿಸುತ್ತಿದ್ದಾವೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಬಾರಿ ಚಿರತೆಗಳು ಗ್ರಾಮಕ್ಕೆ ಲಗ್ಗೆ ಇಟ್ಟಾಗ, ಅರಣ್ಯ ಇಲಾಖೆಯ ಅಧಿಕಾರಿಗಳ ನೆರವಿನಿಂದ ಕಾಡಿಗೆ ಓಡಿಸಲಾಗಿದೆ ಎನ್ನಲಾಗುತ್ತಿದೆ.
ಇದೀಗ ಹೀಗಿದ್ದರೂ ಕಾಡಿನ ಅಂಚಿನಲ್ಲಿಯೇ ಕೋಳಿಫಾರಂ ಶೆಡ್ ನಿರ್ಮಾಣವುದು, ಆ ವಾಸನೆಯಿಂದ ಚಿರತೆ, ಹುಲಿಗಳು ವೀರೇಗೌಡನ ದೊಡ್ಡಿಗೂ ಬರಬಹುದು ಎಂಬ ಆತಂಕವನ್ನು ಗ್ರಾಮಸ್ಥರಲ್ಲಿ ನಿರ್ಮಿಸಿದೆ. ಅಲ್ಲದೇ ಕಾಡು ಪ್ರಾಣಿಗಳ ಹಾವಳಿಯ ನಡುವೆಯೂ ವೀರೇಗೌಡನ ದೊಡ್ಡಿಯಲ್ಲಿ ಕೋಳಿಫಾರಂ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಸೇರಿದಂತೆ ಸ್ಥಳೀಯ ಆಡಳಿತದಿಂದ ಅನುಮತಿ ದೊರೆತಿದ್ದು ಹೇಗೆ ಎಂಬ ಅನುಮಾನಕ್ಕೂ ಕಾರಣವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ವೀರೇಗೌಡನ ದೊಡ್ಡಿಯ ಸಮೀಪ ನಿರ್ಮಿಸುತ್ತಿರುವಂತ ಕೋಳಿಫಾರಂ ಶೆಡ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಗ್ರಾಮದ ಜನರ ಆರೋಗ್ಯದ ಮೇಲೆ ಕೋಳಿಫಾರಂ ವಾಸನ ಪರಿಣಾಮ ಬೀರಲಿದೆ. ಈ ಕೂಡಲೇ ಕೋಳಿಫಾರಂ ನಿರ್ಮಾಣವನ್ನು ನಿಲ್ಲಿಸುವಂತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಗ್ರಾಮ ಪಂಚಾಯ್ತಿ, ಸ್ಥಳೀಯ ಆಡಳಿತ, ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒಂದು ವೇಳೆ ಕೋಳಿಫಾರಂ ನಿರ್ಮಾಣಕ್ಕೆ ಅವಕಾಶ ನೀಡಿದ್ದೇ ಆದರೇ, ಚಿರತೆ, ಹುಲಿಗಳು ದಾಳಿ ನಡೆಸುವ ಸಂಭವವಿಸುವಂತ ಅನಾಹುತಗಳಿಗೆ, ದಾಳಿಗಳಿಗೆ ಸ್ಥಳೀಯ ಸಂಸ್ಥೆಗಳೇ ಹೊಣೆಯಾಗಬೇಕಾಗುತ್ತದೆ. ಅದಕ್ಕೂ ಮುನ್ನಾ ಈಗಲೇ ಎಚ್ಚೆತ್ತು ಕೋಳಿಫಾರಂ ನಿರ್ಮಾಣವನ್ನು ನಿಲ್ಲಿಸುವಂತೆ ವೀರೇಗೌಡನ ದೊಡ್ಡಿಯ ಗ್ರಾಮಸ್ಥರು ಸಂಬಂಧಿಸಿದಂತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಯಾವ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.