ಧಾರವಾಡ: ದೇವಾಲಯಗಳಲ್ಲಿ ಸಲಾಂ ಆರತಿ ಹೆಸರು ಬದಲಾವಣೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಸಲಾಂ ಆರತಿ ಬದಲಾಯಿಸಿದ್ದು ಖುಷಿ ವಿಚಾರ. ಕನ್ನಡ ಭಾಷೆಯಲ್ಲಿ ನಮಸ್ಕಾರ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿ ಗುಜರಾತ್ ಮಾದರಿ ಮಾಡಲು ನಮ್ಮ ಆಗ್ರಹ ಇದ್ದೇ ಇದೆ. ಕಳೆದ ಎಂಟು ವರ್ಷಗಳಿಂದ ನಾನು ಪ್ರಧಾನಿ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ.
ಒಳ್ಳೆಯ ಸಂಗತಿ ಎಲ್ಲೇ ನಡೆದರೂ ಅದನ್ನು ತೆಗೆದುಕೊಳ್ಳಬೇಕು. ಕರ್ನಾಟಕದಲ್ಲೂ ಗುಜರಾತ್ ಮಾದರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.ರಾಜಕೀಯವಾಗಿ ಅಭ್ಯರ್ಥಿಗಳನ್ನು ತೆಗೆದುಹಾಕುವ ಬಗ್ಗೆ ನಾನು ಈಗಲೇ ಏನೂ ಹೇಳುವುದಿಲ್ಲ. ಟಿಕೆಟ್ ಹಂಚುವ ಸಂದರ್ಭ ಬಂದಾಗ ಗೆಲುವು, ಪಕ್ಷದ ನಿಷ್ಠೆ, ಬಿಜೆಪಿ ಆಡಳಿತಕ್ಕೆ ಬದ್ಧತೆ, ನಡೆ ನುಡಿಯಲ್ಲಿ ಸ್ವಚ್ಛತೆ ಎಲ್ಲವನ್ನು ಪರಿಗಣಿಸಿ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು.