ಮಾಸ್ಕೋ (ರಷ್ಯಾ): 2023 ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುವ ಸಾಧ್ಯತೆಯಿದೆ ಎಂದು ರಷ್ಯಾದ ಜಿ 20 (ಶೆರ್ಪಾ) ಸ್ವೆಟ್ಲಾನಾ ಲುಕಾಶ್ ಹೇಳಿದ್ದಾರೆ.
“ಸಹಜವಾಗಿ, ರಷ್ಯಾದ ಅಧ್ಯಕ್ಷರು ಭಾರತದಲ್ಲಿ ನಡೆಯುವ 2023ರ ಜಿ 20 ಶೃಂಗಸಭೆಗೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದನ್ನು ನಿರ್ಧರಿಸುವುದು ಅವರಿಗೆ ಬಿಟ್ಟದ್ದು. ಈಗ ಮುಂದಿನ ಶೃಂಗಸಭೆಯು ಒಂದು ವರ್ಷ ಮುಂದಿದೆ. ಅಂತಹ ಪ್ರಶ್ನೆಗೆ ನಾನು ಉತ್ತರಿಸಲಾರೆ. ನನ್ನ ಪ್ರಕಾರ ಮುಂದಿನ ವರ್ಷ ರಷ್ಯಾ ಅಧ್ಯಕ್ಷರು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಭಾವಿಸುವುದಾಗಿ ಲುಕಾಶ್ ಹೇಳಿದರು.
ಭಾರತವು ಡಿಸೆಂಬರ್ 1 ರಂದು ಇಂಡೋನೇಷ್ಯಾದಿಂದ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಪುಟಿನ್ ಇಂಡೋನೇಷ್ಯಾದಲ್ಲಿ ಜಿ 20 ಶೃಂಗಸಭೆಯಿಂದ ಹೊರಗುಳಿದಿದ್ದರು. ತನ್ನ G20 ಅಧ್ಯಕ್ಷತೆಯಲ್ಲಿ ಭಾರತವು ದೇಶಾದ್ಯಂತ ಸುಮಾರು 200 ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದೆ. ಮುಂದಿನ ವರ್ಷ ರಷ್ಯಾದ ಅಧ್ಯಕ್ಷರು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಲುಕಾಶ್ ಹೇಳಿದರು.
ನವದೆಹಲಿಯಲ್ಲಿ ಜಿ 20 ನಾಯಕರ ಸಭೆಯನ್ನು 2023 ರ ಸೆಪ್ಟೆಂಬರ್ 9-10 ಕ್ಕೆ ನಿಗದಿಪಡಿಸಲಾಗಿದೆ.
ತುಮಕೂರು: ಕೊರಟಗೆರೆಯ ಇರಕಸಂದ್ರ ಗ್ರಾಮದಲ್ಲಿ ಚಿರತೆ ದಾಳಿ, ಇಬ್ಬರು ಬಾಲಕರಿಗೆ ಗಾಯ
BIG NEWS : ʻಹಾನರ್ಸ್ ಪದವಿʼಗೆ ಇನ್ಮುಂದೆ ಮೂರಲ್ಲ, 4 ವರ್ಷ ಅಧ್ಯಯನ ನಡೆಸಬೇಕು: ಹೊಸ ಕರಡು ನೀತಿ | Honours Degree