ಹಾಸನ: ಕಾಲೇಜಿಗೆ ತೆರಳುತ್ತಿದ್ದಂತ ವೇಳೆಯಲ್ಲಿ ಅಪಘಾತದಲ್ಲಿ ಆತ ತೀವ್ರವಾಗಿ ಗಾಯಗೊಂಡಿದ್ದನು. ತಲೆಗೆ ಪೆಟ್ಟುಬಿದ್ದಿದ್ದರಿಂದ ಪ್ರಜ್ಞೆಯನ್ನು ಕಳೆದಕೊಂಡು, ಮೆದುಳು ನಿಷ್ಕ್ರೀಯಗೊಂಡಿತ್ತು. ಇಂತಹ ಪುತ್ರನ ಅಂಗಾಂಗವನ್ನು ದಾನ ಮಾಡುವ ಮೂಲಕ, ಮಗನ ಸಾವಿನಲ್ಲೂ ಈಗ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ನಿಗಮಗಳು ನಿಷ್ಕ್ರೀಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
ಹೌದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯ ಯುವಕ ನಾರಾಯಣ ಗೌಡ(17) ಕಾಲೇಜಿಗೆ ತೆರಳುತ್ತಿದ್ದಂತ ವೇಳೆಯಲ್ಲಿ ಡಿಸೆಂಬರ್ 6ರಂದು ಅಪಘಾತದಲ್ಲಿ ಗಾಯಗೊಂಡಿದ್ದನು. ಅಪಘಾತದಿಂದಾಗಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು, ಮೆದುಳು ನಿಷ್ಕ್ರೀಯಗೊಂಡಿತ್ತು.
ಪತ್ನಿಯ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ವಿಶೇಷ ಹಿಂದೂ ಕಾಯಿದೆಯಡಿ ನ್ಯಾಯಲಯಕ್ಕೆ ಅವಕಾಶವಿದೆ – ಹೈಕೋರ್ಟ್
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಾರಾಯಣ ಗೌಡ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಮೆದುಳು ನಿಷ್ಕ್ರೀಯಗೊಂಡಿದೆ ಎಂಬುದಾಗಿ ಪೋಷಕರಿಗೆ ವೈದ್ಯರು ಹೇಳಿದ್ದರು. ಅಲ್ಲದೇ ಅಂಗಾಂಗ ದಾನಕ್ಕೂ ಮನವಿ ಮಾಡಿದ್ದರು. ವೈದ್ಯರ ಮನವಿಗೆ ಒಪ್ಪಿದಂತ ನಾರಾಯಣ ಗೌಡ ತಂದೆ ರಮೇಶ್ ಹಾಗೂ ತಾಯಿ ರಾಧಾ ನಾಳೆ ಪುತ್ರನ ಅಂಗಾಂಗವನ್ನು ದಾನ ಮಾಡಲಿದ್ದಾರೆ. ಈ ಮೂಲಕ ಮಗನ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆಯಲಿದ್ದಾರೆ.
BIG NEWS: ‘ಕರ್ನಾಟಕ’ದಲ್ಲಿ ಅವಧಿಗೆ ಮುನ್ನವೇ ‘ವಿಧಾನಸಭೆ’ಗೆ ಚುನಾವಣೆ.? | Karnataka Assembly Election 2023