ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಸೇರಿದಂತೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ.
ಸದ್ಯ,ಈ ಪ್ರಕರಣದ ಬೆನ್ನತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮೂರು ತನಿಖಾ ತಂಡಗಳ ರಚನೆ ಮಾಡಿದ್ದಾರೆ. ನಿನ್ನೆ ದಾಳಿಗೊಳಗಾದ ರೌಡಿಶೀಟರ್ ಶಿವಶಂಕರ್ ರೆಡ್ಡಿಮೂರು ಕೊಲೆ ಮತ್ತು ಒಂದು ಕೊಲೆ ಯತ್ನದಲ್ಲಿ ಶಿವಶಂಕರ್ ರೆಡ್ಡಿ ಭಾಗಿಯಾಗಿದ್ದನು.
ಆಂಧ್ರಪ್ರದೇಶದ ಮದನಪಲ್ಲಿ ಠಾಣೆ ರೌಡಿಶೀಟರ್ ಆಗಿರುವ ಆರೋಪಿ ಶಿವಶಂಕರ್ ರೆಡ್ಡಿ ಮೇಲೆ ನಿನ್ನೆ ಗುಂಡು ಹಾರಿಸಲಾಗಿತ್ತು, ತನ್ನ ಚಾಲಕನ ಜೊತೆ ಹೊರಗಡೆ ತೆರಳಿದ್ದ ವೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 3 ತನಿಖಾ ತಂಡಗಳನ್ನು ರಚನೆ ಮಾಡಲಾಗಿದೆ. ಗುಂಡಿನ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, . ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
BIGG NEWS : ಮತ್ತೆ ಕೋಟ್ಯಾಧೀಶನಾದ ಮಾದಪ್ಪ: 34 ದಿನಗಳಲ್ಲಿ ₹2 ಕೋಟಿ ಸಂಗ್ರಹ | Male Mahadeshwar hill