ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಪುರಸಭೆಯ ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 8 ರಿಂದ 14 ವರ್ಷ ವಯಸ್ಸಿನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಈಜುಕೊಳ ಅಕಾಡೆಮಿ ಮೇಲ್ವಿಚಾರಕರು ಗುರುವಾರ ತಿಳಿಸಿದ್ದಾರೆ.
ವಿಜಯವಾಡ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಬುಧವಾರ ಮಕ್ಕಳು ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೊಳದಲ್ಲಿ ಕ್ಲೋರಿನ್ ಸೋರಿಕೆಯಿಂದಾಗಿ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಎಲ್ಲಾ ಮಕ್ಕಳು 50 ಮೀಟರ್ ಪೂಲ್ನಲ್ಲಿ ಈಜುತ್ತಿದ್ದರು ಮತ್ತು 25 ಮೀಟರ್ ಕೊಳದ ಟ್ಯಾಂಕರ್ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಡಿ.11ರಂದು ಏಲೂರಿನಲ್ಲಿ ನಡೆಯಲಿರುವ ಸ್ಪರ್ಧೆಗಳಿಗೆ ಮಕ್ಕಳು ಸಿದ್ಧತೆ ನಡೆಸಿದ್ದರು.
ಅಸ್ವಸ್ಥಗೊಂಡ 10 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಹಾಗೂ ಮಗುವನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಮತ್ತೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಎಲ್ಲಾ ವಿದ್ಯಾರ್ಥಿಗಳು ಈಗ ಸ್ಥಿರವಾಗಿದ್ದಾರೆ.