ಬೆಂಗಳೂರು : 921 ಎಲೆಕ್ಟ್ರಿಕ್ ಬಸ್ ಖರೀದಿಗೆ ಸಚಿವ ಸಂಪುಟ ಸಭೆ ನಿನ್ನೆ (ಡಿ.8) ಒಪ್ಪಿಗೆ ನೀಡಿದೆ.
ನಿನ್ನೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಬಿಎಂಟಿಸಿಗೆ ಹೊಸ ಬಸ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೇಂದ್ರದ ಸಬ್ಸಿಡಿ ನೆರವಿನಲ್ಲಿಬಸ್ ಖರೀದಿ ಮಾಡಲಾಗುತ್ತಿರುವುದಾಗಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ಒಂದು ಬಸ್ಸಿಗೆ 1.50 ಕೋಟಿ ಬೆಲೆ ಇದ್ದು, ಕೇಂದ್ರ ಸರ್ಕಾರ ಪ್ರತಿಯೊಂದು ಬಸ್ಸಿಗೆ 39,08 ಲಕ್ಷ ಸಹಾಯ ಧನ ನೀಡುತ್ತದೆ. ಈ ಸಹಾಯವನ್ನು ಬಸ್ ಒದಗಿಸುವ ಕಂಪನಿಗೆ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಕಂಪನಿಯೇ ಭರಿಸಿ ಬಸ್ ಖರೀದಿ ಮಾಡುತ್ತದೆ ಎಂದರು. ಚಾಲಕನನ್ನು ಕಂಪನಿಯೇ ಒದಗಿಸಲಿದ್ದು, ಕಂಡಕ್ಟರ್ ಬಿಎಂಟಿಸಿಯವರೇ ಇರುತ್ತಾರೆ ಎಂದು ಹೇಳಿದರು.
ಇದೇ ವೇಳೆ ಸೇಡಂ ಚಿಂಚೋಳಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಾಗಿ 13.82 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ 25.6 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ತಿಮ್ಮಸಂದ್ರ ಗ್ರಾಮದಲ್ಲಿ 7 ಎಕರೆ ಭೂಮಿ ನೀಡಿಕೆ. ಲಾನ್ ಟೆನಿಸ್ ಅಸೋಸಿಯೇಷನ್ ಗೆ ಭೂಮಿ ನೀಡಿಕೆ. ಹಿರೆಮಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೆ ಭೂಮಿ ನೀಡಲಾಗುತ್ತಿದೆ. ಶೈಕ್ಷಣಿಕ ಉದ್ದೇಶಕ್ಕಾಗಿ 7 ಎಕರೆ ಭೂಮಿ ಕೊಟ್ಟಿದ್ದೇವೆ. ಕಾರ್ಕಳದ ಬಳಿ ದೇಗುಲ ನಿರ್ಮಾಣಕ್ಕೆ 13 ಕೋಟಿ ನೀಡಲಾಗುತ್ತಿದೆ ಎಂದರು.
BREAKING NEWS : ಇಂದು ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ‘ಥಾವರ್ ಚಂದ್ ಗೆಹ್ಲೋಟ್’ ಭೇಟಿ : ಬಿಗಿ ಭದ್ರತೆ
BIGG NEWS : ಡಿ.12 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ‘ಮಳೆ’ |Rain Alert Karnataka