ಬೆಂಗಳೂರು: ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ BJP ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ. ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ( BJP Leader ) ಮನಗಾಣಲಿ! ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ? ತವರಿಗೆ ಮಾತ್ರ ಮೋದಿಯವರ ಪ್ರಭಾವ ಸೀಮಿತವಾಗಿದೆಯಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನೆ ಮಾಡಿದೆ.
ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ @BJP4Karnataka ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ.
ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಮನಗಾಣಲಿ!ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ?
ತವರಿಗೆ ಮಾತ್ರ ಮೋದಿಯವರ ಪ್ರಭಾವ ಸೀಮಿತವಾಗಿದೆಯಲ್ಲವೇ?— Karnataka Congress (@INCKarnataka) December 8, 2022
ಈ ಬಗ್ಗೆ ಟ್ವಿಟ್ ಮಾಡಿದ್ದು,‘ ಬಿಜೆಪಿ ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ( Gujarat Results ) ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ. ಬಿಜೆಪಿಯ ದುರಾಡಳಿತವನ್ನು ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದಿದೆ.
'@BJP4Karnataka ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ.
ಬಿಜೆಪಿಯ ದುರಾಡಳಿತವನ್ನು
ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ.— Karnataka Congress (@INCKarnataka) December 8, 2022
ನೋಟ್ ಬ್ಯಾನ್ ಎಂಬ ಮಹಾ ಹಗರಣವನ್ನು ಸುಧಾರಣಾ ಕ್ರಮ ಎಂದು ಬಿಂಬಿಸಿತ್ತು ಬಿಜೆಪಿ. ದೇಶದ ಜನರನ್ನು ನರಕಕ್ಕೆ ತಳ್ಳಿದ ಈ ಕ್ರಮದಿಂದ ಆದ ಪ್ರಯೋಜನವೇನು ಎಂಬುದನ್ನು ಬಿಜೆಪಿ ಇದುವರೆಗೂ ಬಾಯಿ ಬಿಡುತ್ತಿಲ್ಲ. ಇಂಥದ್ದೊಂದು ದುರಂತಮಯ ನಿರ್ದಾರದ ದಾಖಲೆಗಳನ್ನು ಕೇಳುತ್ತಿದೆ ಸುಪ್ರೀಂ ಕೋರ್ಟ್, ದಾಖಲೆ ಕೊಡುವ ಧೈರ್ಯ ಕೇಂದ್ರ ಸರ್ಕಾರಕ್ಕಿದೆಯೇ? ಎಂದು ಕೇಳಿದೆ.
ನೋಟ್ ಬ್ಯಾನ್ ಎಂಬ ಮಹಾ ಹಗರಣವನ್ನು ಸುಧಾರಣಾ ಕ್ರಮ ಎಂದು ಬಿಂಬಿಸಿತ್ತು ಬಿಜೆಪಿ.
ದೇಶದ ಜನರನ್ನು ನರಕಕ್ಕೆ ತಳ್ಳಿದ ಈ ಕ್ರಮದಿಂದ ಆದ ಪ್ರಯೋಜನವೇನು ಎಂಬುದನ್ನು ಬಿಜೆಪಿ ಇದುವರೆಗೂ ಬಾಯಿ ಬಿಡುತ್ತಿಲ್ಲ.
ಇಂಥದ್ದೊಂದು ದುರಂತಮಯ ನಿರ್ದಾರದ ದಾಖಲೆಗಳನ್ನು ಕೇಳುತ್ತಿದೆ ಸುಪ್ರೀಂ ಕೋರ್ಟ್, ದಾಖಲೆ ಕೊಡುವ ಧೈರ್ಯ ಕೇಂದ್ರ ಸರ್ಕಾರಕ್ಕಿದೆಯೇ? pic.twitter.com/PPWL7Ver9p
— Karnataka Congress (@INCKarnataka) December 8, 2022